ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಆನೆಗಳ ಸಾವು

ಮಾನವ–ಆನೆ ಸಂಘರ್ಷ ತಡೆಗೆ ಪರಿಣಾಮಕಾರಿ ಕಾರ್ಯಕ್ರಮಕ್ಕೆ ಸಲಹೆ
Last Updated 13 ಡಿಸೆಂಬರ್ 2020, 10:16 IST
ಅಕ್ಷರ ಗಾತ್ರ

ಕೊಲಂಬೊ: ಮಾನವ-ಆನೆ ಸಂಘರ್ಷದಿಂದಾಗಿ ಶ್ರೀಲಂಕಾ, ವಿಶ್ವದಲ್ಲೇ ಅತಿ ಹೆಚ್ಚು ಆನೆಗಳ ಸಾವುಗಳನ್ನು ದಾಖಲಿಸಿರುವ ರಾಷ್ಟ್ರವಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಇತ್ತೀಚೆಗೆ ನಡೆದ ದ್ವೀಪರಾಷ್ಟ್ರದ ಸಾರ್ವಜನಿಕ ಲೆಕ್ಕಪತ್ರ ಸಮಿತಿ(ಕೊಪಾ) ಸಭೆಯಲ್ಲಿ ಈ ವಿಷಯ ಬಹಿರಂಗಗೊಂಡಿದೆ. ಇದರ ಜತೆಗೆ, ಈ ಸಂಘರ್ಷದಲ್ಲಿ ಮಾನವನ ಸಾವಿನ ಸಂಖ್ಯೆಯಲ್ಲಿ ಜಾಗತಿಕವಾಗಿ ಭಾರತದ ನಂತರ ಶ್ರೀಲಂಕಾ ಎರಡನೇ ಸ್ಥಾನದಲ್ಲಿದೆ ಎಂದು ಡೈಲಿ ನ್ಯೂಸ್ ವರದಿ ಮಾಡಿದೆ.

ಈ ಹಿನ್ನೆಲೆಯಲ್ಲಿ ಖ್ಯಾತ ಆನೆ ತಜ್ಞ, ಸಂರಕ್ಷಣೆ ಮತ್ತು ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಪೃಥ್ವಿರಜ್ ಫರ್ನಾಂಡೊ ‌ಅವರಿಂದ ಮಾನವ–ಆನೆ ಸಂಘರ್ಷದ ಬಗ್ಗೆ ವಿಶೇಷವಾಗಿ ಆಡಿಟ್ ಮಾಡಿಸುವಂತೆ ‘ಕೊಪಾ‘ ಆದೇಶಿಸಿದೆ.

ಸಿಒಪಿಇ (ಕೊಪೆ) ಸಮಿತಿ ಅಧ್ಯಕ್ಷ ತಿಸ್ಸಾ ವಿತರಣಾ ‘ಶ್ರೀಲಂಕಾದಲ್ಲಿ ಕಳೆದ 12 ತಿಂಗಳಿಂದ ನಡೆದಿರುವ ಮಾನವ– ಆನೆ ಸಂಘರ್ಷದಲ್ಲಿ ಒಟ್ಟು 407 ಆನೆಗಳು ಸಾವನ್ನಪ್ಪಿವೆ. ಕಳೆದ ವರ್ಷದ 272 ಆನೆಗಳು ಸಾವನ್ನಪ್ಪಿದ್ದವು. ಈ ವರ್ಷ ಆನೆಯ ದಾಳಿಯಿಂದ ಸತ್ತ ಮನುಷ್ಯರ ಸಂಖ್ಯೆ 85. ಕಳೆದ ವರ್ಷ 122 ಮಂದಿ ಸಾವನ್ನಪ್ಪಿದರು. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷದ ಆನೆಗಳ ಸಾವಿನ ಪ್ರಮಾಣ ಹೆಚ್ಚಾಗಿದೆ. ಮನುಷ್ಯರ ಸಾವಿನ ಸಂಖ್ಯೆಯಲ್ಲಿ ಇಳಿಕೆಯಾಗಿದೆ‘ ಎಂದು ಹೇಳಿದ್ದಾರೆ.

ವಿತರಣಾ ಮತ್ತು ಇತರ ಸದಸ್ಯರು, ಶ್ರೀಲಂಕಾದಲ್ಲಿ ನಡೆಯುತ್ತಿರುವ ಮಾನವ– ಆನೆ ಸಂಘರ್ಷ ನಿಯಂತ್ರಿಸುವುದಕ್ಕಾಗಿ ವನ್ಯಜೀವಿ ವಿಭಾಗ ಹಾಗೂ ಇನ್ನಿತರ ಸೂಕ್ತ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಬೇಕೆಂದು ಒತ್ತಿ ಹೇಳಿದರು. ಈ ಸಂಘರ್ಷವನ್ನು ತಡೆಯುವುದಕ್ಕಾಗಿ ಪರಿಣಾಮಕಾರಿಯಾದ ಕಾರ್ಯಕ್ರಮವನ್ನು ರೂಪಿಸಬೇಕೆಂದು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT