ಸೋಮವಾರ, ಸೆಪ್ಟೆಂಬರ್ 21, 2020
22 °C
ಭಾರತೀಯ ರಾಯಭಾರ ಕಚೇರಿಗೆ ಮೀನುಗಾರರ ದೂರು

ಭಾರತೀಯರಿಂದ ಅಕ್ರಮ ಮೀನುಗಾರಿಕೆ ಆರೋಪ: ಶ್ರೀಲಂಕಾದಲ್ಲಿ ಪ್ರತಿಭಟನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೊಲಂಬೊ: ತಮ್ಮ ಗಡಿ ದಾಟಿ ಬಂದು ಅಕ್ರಮವಾಗಿ ಮೀನು ಹಿಡಿಯುತ್ತಿರುವ ಭಾರತೀಯ ಮೀನುಗಾರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ  ಶ್ರೀಲಂಕಾದ ಉತ್ತರ ಜಾಫ್ನಾ ದ್ವೀಪದಲ್ಲಿ ಮೀನುಗಾರರು ಸೋಮವಾರ ಪ್ರತಿಭಟನೆ ನಡೆಸಿದರು.

ಈ ಸಂಬಂಧ ಶ್ರೀಲಂಕಾದ ಮೀನುಗಾರರು ಜಾಫ್ನಾದಲ್ಲಿರುವ ಭಾರತೀಯ ರಾಯಭಾರಿ ಎಸ್‌. ಬಾಲಾಚಂದ್ರನ್‌ ಅವರಿಗೆ ಸೋಮವಾರ ದೂರು ನೀಡಿ, ಶೀಘ್ರ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.  

ಭಾರತೀಯ ಮೀನುಗಾರರು ವಾಡಮಾರಚಾಚಿ ಸೆಕ್ಟರ್‌ ಮೂಲಕ ಶ್ರೀಲಂಕಾದ ಸಮುದ್ರದ ಗಡಿಯೊಳಗೆ ಪ್ರವೇಶಿಸುತ್ತಿದ್ದಾರೆ. ಸುಮಾರು 3000 ಮೀನುಗಾರರು ನಮಗೆ ಸೇರಿದ ಸಮುದ್ರದ ಭಾಗದಲ್ಲಿ ಪ್ರತಿನಿತ್ಯ ಮೀನು ಹಿಡಿಯುತ್ತಿದ್ದಾರೆ. ಇದರಿಂದ ಸ್ಥಳೀಯ ಮೀನುಗಾರರಿಗೆ ನಷ್ಟ ಉಂಟಾಗುತ್ತಿದೆ ಎಂದು ‍ಪ್ರತಿಭಟನಕಾರರು ಆರೋಪಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು