ಗುರುವಾರ , ಜೂನ್ 30, 2022
24 °C

ನಾಸಾ ಟೆಲಿಸ್ಕೋಪ್‌ ಉಡಾವಣೆ ಮುಂದೂಡಿಕೆ

ಎ.ಪಿ Updated:

ಅಕ್ಷರ ಗಾತ್ರ : | |

Prajavani

ಬರ್ಲಿನ್‌: ಹಬ್ಬಲ್‌ ದೂರದರ್ಶಕಕ್ಕೆ (ಟೆಲಿಸ್ಕೋಪ್‌) ಪರ್ಯಾಯವಾದ, ನಾಸಾದ ಹೊಸ ಟೆಲಿಸ್ಕೋಪ್‌ ಅನ್ನು ಕಕ್ಷೆಗೆ ಕಳುಹಿಸುವ ಪ್ರಕ್ರಿಯೆ ಮುಂದೂಡಲಾಗಿದೆ ಯುರೋಪಿಯನ್‌ನ ಬಾಹ್ಯಾಕಾಶ ಸಂಸ್ಥೆ (ಇಎಸ್‌ಎ) ತಿಳಿಸಿದೆ.

ಇಎಸ್‌ಎ ಈ ಕುರಿತು ಹೇಳಿಕೆ ನೀಡಿದ್ದು, ಫ್ರೆಂಚ್ ಗಯಾನಾದಲ್ಲಿ ನಡೆದಿದ್ದ ಘಟನೆಯಲ್ಲಿ ಟೆಲಿಸ್ಕೋಪ್‌ ಜಖಂಗೊಂಡಿದೆಯೇ ಎಂಬುದರ ಪರಿಶೀಲನೆಗೆ ಮುಂದೂಡಲಾಗಿದೆ. ಉಡಾವಣಾ ವಾಹಕಕ್ಕೆ ಜೇಮ್ಸ್‌ ವೆಬ್‌ ಸ್ಪೇಸ್‌ ಟೆಲಿಸ್ಕೋಪ್‌ ಅನ್ನು ಅಳವಡಿಸುವಾಗ ಜಾರಿದ್ದು, ಜಖಂಗೊಂಡಿದೆಯೇ ಎಂದು ಪರಿಶೀಲಿಸಲಾಗುತ್ತಿದೆ ತಿಳಿಸಿದೆ.

ಟೆಲಿಸ್ಕೋಪ್‌ ಅನ್ನು ಈಗ ಎರೈನಾ 5 ರಾಕೆಟ್‌ ಮೂಲಕ ಡಿಸೆಂಬರ್‌ 22ರಂದು ಉಡಾವಣೆ ಮಾಡಲಾಗುವುದು. ಈ ಮೊದಲು ನಿಗದಿಯಾಗಿದ್ದಂತೆ ಡಿಸೆಂಬರ್‌ 18ರಂದು ಉಡಾವಣೆ ಮಾಡಬೇಕಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು