ಗುರುವಾರ , ಜೂನ್ 30, 2022
23 °C

ಅಮೆರಿಕದಲ್ಲಿ ಸೇವೆಗೆ ವಿದೇಶಿ ವೈದ್ಯರಿಗೆ ಅವಕಾಶ: ಮಸೂದೆ ಮರುಮಂಡನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಅಮೆರಿಕದ ಗ್ರಾಮೀಣ ಭಾಗದಲ್ಲಿ ವೈದ್ಯರ ಕೊರತೆಯನ್ನು ನೀಗಿಸುವ ಸಂಬಂಧ, ವಿದೇಶಗಳ ವೈದ್ಯರನ್ನು ಆಕರ್ಷಿಸಲು ಮಸೂದೆಯೊಂದನ್ನು ಪುನಃ ಮಂಡಿಸುವುದಾಗಿ ದ್ವಿಪಕ್ಷೀಯ ಸಂಸದರ ಗುಂಪೊಂದು ಘೋಷಿಸಿದೆ.

ಅಮೆರಿಕಕ್ಕೆ ಬರಲು ಉತ್ಸುಕರಾಗಿರುವ ಹಾಗೂ ಈಗಾಗಲೇ ಅಮೆರಿಕದಲ್ಲಿರುವ ಸಾವಿರಾರು ಜನ ಭಾರತ ಮೂಲದ ವೈದ್ಯರಿಗೆ ಈ ಮಸೂದೆಯಿಂದ ಲಾಭವಾಗಲಿದೆ.

ಸೆನೆಟರ್‌ ಜಾಕಿ ರೋಸೆನ್, ಅಮಿ ಕ್ಲೋಬಚರ್‌, ಸೂಸನ್ ಕಾಲಿನ್ಸ್‌ ಹಾಗೂ ಜೋನಿ ಅರ್ನ್ಸ್ಟ್ ಸೇರಿದಂತೆ ಪ್ರಭಾವಿ ಸಂಸದರು ಇಂಥ ಕ್ರಮಕ್ಕೆ ಮುಂದಾಗಿದ್ದಾರೆ. ‘ಕಾನ್ರಾಡ್‌ ಸ್ಟೇಟ್‌ 30 ಆ್ಯಂಡ್‌ ಫಿಜಿಷಿಯನ್ ಆ್ಯಕ್ಸೆಸ್ ರಿಆಥರೈಜೇಶನ್‌ ಆ್ಯಕ್ಟ್‌’ ಅನ್ನು ಮತ್ತೊಮ್ಮೆ ಮಂಡಿಸಲಾಗುತ್ತದೆ.

ಇದರಿಂದ, ಈಗಾಗಲೇ ಅಮೆರಿಕದಲ್ಲಿರುವ ವೈದ್ಯರು ತಮ್ಮ ಸೇವೆಯನ್ನು ಮುಂದುವರಿಸಲು ಅವಕಾಶ ನೀಡಲಾಗುತ್ತದೆ. ಜೊತೆಗೆ, ವೈದ್ಯರ ಕೊರತೆ ಇರುವಂಥ ಪ್ರದೇಶಗಳಲ್ಲಿ ಸೇವೆ ಸಲ್ಲಿಸಬೇಕು ಎಂಬ ನಿಬಂಧನೆಗೆ ಒಪ್ಪಿ, ಅವರು ಸೇವೆ ಮುಂದುವರಿಸಬೇಕಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು