ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಜಬ್ ಧರಿಸಿದ ಮಹಿಳೆಗೆ ಫ್ರಾನ್ಸ್ ಅಧ್ಯಕ್ಷರ ಪಕ್ಷದ ಟಿಕೆಟ್ ಇಲ್ಲ

Last Updated 13 ಮೇ 2021, 13:32 IST
ಅಕ್ಷರ ಗಾತ್ರ

ಪ್ಯಾರಿಸ್: ಫ್ರಾನ್ಸ್ ಅಧ್ಯಕ್ಷ ಎಮ್ಯಾನ್ಯುಯೆಲ್ ಮ್ಯಾಕ್ರನ್ ಅವರ ನೇತೃತ್ವದ ಆಡಳಿತ ಪಕ್ಷವು ಸ್ಥಳೀಯ ಚುನಾವಣೆಯಲ್ಲಿ ಮುಸ್ಲಿಂ ಮಹಿಳೆ ತನ್ನ ಪಕ್ಷದ ಟಿಕೆಟ್‌ನಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸುವುದನ್ನು ನಿರ್ಬಂಧಿಸಿದೆ. ಚುನಾವಣಾ ಪ್ರಚಾರದ ಬ್ಯಾನರ್‌ನಲ್ಲಿ ಹಿಜಬ್ ಧರಿಸಿದ್ದ ಮಹಿಳೆ ಚಿತ್ರ ಕಾಣಿಸಿಕೊಂಡ ಬಳಿಕ ಈ ನಿರ್ಧಾರ ಪ್ರಕಟಿಸಲಾಗಿದೆ.

ಲಾ ರಿಪಬ್ಲಿಕ್ ಎನ್ ಮಾರ್ಚೆ (ಲಾರೆಮ್) ಪಕ್ಷದ ಪ್ರಕಾರ, ಜಾತ್ಯತೀತ ಫ್ರಾನ್ಸ್‌ನಲ್ಲಿ ಚುನಾವಣಾ ಪ್ರಚಾರದ ದಾಖಲೆಗಳಲ್ಲಿ ಧಾರ್ಮಿಕ ಚಿಹ್ನೆಗಳನ್ನು ಬಹಿರಂಗವಾಗಿ ಪ್ರದರ್ಶಿಸಲು ಯಾವುದೇ ಸ್ಥಳವಿರಬಾರದು.

‘ಹಿಜಬ್ ಧರಿಸಿದ್ದ ಈ ಮಹಿಳೆ ಎನ್ ಮಾರ್ಚೆ ಅಭ್ಯರ್ಥಿಯಾಗುವುದಿಲ್ಲ’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಟಾನಿಸ್ಲಾಸ್ ಗೌರಿನಿ ಹೇಳಿರುವುದಾಗಿ ಆರ್‌ಟಿಎಲ್ ರೇಡಿಯೊ ವರದಿ ಮಾಡಿದೆ.

ಆದರೆ, ಪ್ರಚಾರದ ಬ್ಯಾನರ್‌ಗಳಲ್ಲಿ ಹಿಜಬ್ ಅಥವಾ ಇತರ ಧಾರ್ಮಿಕ ಚಿಹ್ನೆಗಳ ಉಡುಪು ಧರಿಸುವುದಕ್ಕೆ ಫ್ರೆಂಚ್ ಕಾನೂನಿನಡಿ ನಿಷೇಧವಿಲ್ಲ.

ಮುಂದಿನ ವರ್ಷ ಫ್ರಾನ್ಸ್‌ನಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದ್ದು, ಅದಕ್ಕೂ ಮುನ್ನ ಫ್ರೆಂಚ್ ಸಮಾಜದಲ್ಲಿ ಇಸ್ಲಾಂ ಧರ್ಮದ ಸ್ಥಾನವು ಎಷ್ಟು ಸೂಕ್ಷ್ಮವಾಗಿದೆ ಎಂಬುದನ್ನು ಈ ಪ್ರಸಂಗವು ವಿವರಿಸುತ್ತದೆ. ಮ್ಯಾಕ್ರಾನ್ ಈ ಚುನಾವಣೆಯಲ್ಲಿ ಮರು ಆಯ್ಕೆ ಬಯಸುತ್ತಿದ್ದಾರೆ.

2017 ರ ಚುನಾವಣಾ ವಿಜಯದ ನಂತರ ತನ್ನ ಹೊಸ ಪಕ್ಷದ ಬಹು-ಸಾಂಸ್ಕೃತಿಕ, ಜನಾಂಗೀಯ-ವೈವಿಧ್ಯತೆಯ ಪ್ರತಿಷ್ಠೆ ಪ್ರದರ್ಶಿಸಿದ್ದ ಮ್ಯಾಕ್ರನ್, ಫ್ರಾನ್ಸ್‌ನ ಪ್ರಮುಖ ಮೌಲ್ಯಗಳಿಗೆ ಮತ್ತು ಗಣರಾಜ್ಯದ ಏಕತೆಗೆ ಇಸ್ಲಾಮಿಕ್ ಪ್ರತ್ಯೇಕತಾವಾದದ ಬೆದರಿಕೆ ಹೆಚ್ಚುತ್ತಿರುವ ಬಗ್ಗೆ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT