ಶುಕ್ರವಾರ, ಮೇ 20, 2022
19 °C

ಮಹಾವೀರ ಜಯಂತಿ: ಶುಭ ಹಾರೈಸಿದ ಅಮೆರಿಕ ಅಧ್ಯಕ್ಷ ಬೈಡನ್‌

ಪಿಟಿಐ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಅವರು ಮಹಾವೀರ ಜಯಂತಿಯ ಸಂದರ್ಭದಲ್ಲಿ ಜನತೆಗೆ ಶುಭ ಹಾರೈಸಿದ್ದಾರೆ.

'ಸತ್ಯಾನ್ವೇಷಣೆಗೆ, ಹಿಂಸೆಯಿಂದ ವಿಮುಖನಾಗಲು, ಪರಸ್ಪರ ಸೌಹಾರ್ದದಿಂದ ಬದುಕಲು ಮಹಾವೀರ ಸ್ವಾಮಿ ಅವರ ಬದುಕಿನ ಸಾರಗಳು ಅತ್ಯುತ್ತಮ ಉದಾಹರಣೆ. ಎಲ್ಲರಿಗೂ ಶಾಂತಿ, ಸಂತೋಷ ಮತ್ತು ಯಶಸ್ಸು ಸಿಗಲಿ' ಎಂದು ಟ್ವೀಟ್‌ ಮೂಲಕ ತಮ್ಮ ಹಾಗೂ ಪತ್ನಿ, ಅಮೆರಿಕ ಮೊದಲ ಮಹಿಳೆ ಜಿಲ್‌ ಬೈಡನ್‌ ಪರವಾಗಿ ಬೈಡನ್‌ ಗುರುವಾರ ಶುಭ ಕೋರಿದ್ದಾರೆ.

'ಏಷ್ಯನ್‌ ಅಮೆರಿಕನ್‌ ಪೆಸಿಫಿರ್‌ ಐಲೆಂಡರ್‌ ಮತ್ತು ಹವಾಯಿನ್‌ ಸಮಿತಿ'ಯ ಪ್ರಮುಖ ಸಲಹೆಗಾರ ಅಜಯ್‌ ಭುಟೊರಿಯಾ ಅವರು ಬೈಡನ್‌ ಅವರ ಸಂದೇಶವನ್ನು ಸ್ವಾಗತಿಸಿದ್ದಾರೆ. ಜೈನ ಧರ್ಮದ 24ನೇ ತೀರ್ಥಂಕರ ಮಹಾವೀರನ ಬೋಧನೆಗಳು ವಿಶ್ವಕ್ಕೆ ಅಗತ್ಯವಾಗಿದೆ. ಎಲ್ಲರೂ 'ಅಹಿಂಸೆ'ಯ ಮಾರ್ಗದಲ್ಲಿ ನಡೆಯಬೇಕು ಎಂದು ಅಜಯ್‌ ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು