ಸೋಮವಾರ, ಮೇ 16, 2022
30 °C
ಭ್ರಷ್ಟಾಚಾರ ಆರೋಪ: ವಿಚಾರಣೆಗೆ ಆದೇಶ

ಮಲೇಷ್ಯಾದ ಮಾಜಿ ಪ್ರಧಾನಿ ಪತ್ನಿಗೂ ಕಂಟಕ

ಎಪಿ Updated:

ಅಕ್ಷರ ಗಾತ್ರ : | |

Prajavani

ಕ್ವಾಲಾಲಂಪುರ: ಭ್ರಷ್ಟಾಚಾರ ಆರೋಪದ ಮೇರೆಗೆ ಮಲೇಷ್ಯಾದ ಮಾಜಿ ಪ್ರಧಾನಿ ನಜೀಬ್‌ ರಜಾಕ್‌ ಅವರು ತಪ್ಪಿತಸ್ಥ ಎಂಬ ತೀರ್ಪು ಬಂದಿರುವಂತೆಯೇ ಅವರ ಪತ್ನಿ ರೋಸ್ಮಾ ಮನ್ಸೋರ್ ಅವರಿಗೂ ಕಂಟಕ ಎದುರಾಗಿದ್ದು, ವಿಚಾರಣೆ ಎದುರಿಸುವಂತೆ ನ್ಯಾಯಾಲಯವೊಂದು ಆದೇಶ ನೀಡಿದೆ.

1.25 ಶತಕೋಟಿ ರಿಗಿಟ್‌ (31 ಕೋಟಿ ಡಾಲರ್‌) ಮೊತ್ತದ ಸೌರ ಇಂಧನ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ರೋಸ್ಮಾ ಅವರು ವಿಚಾರಣೆ ಎದುರಿಸಬೇಕು. ಬೊರ್ನಿಯೊ ದ್ವೀಪದಲ್ಲಿ ಶಾಲೆಗಳಿಗೆ ಸೌರ ಇಂದನ ಫಲಕಗಳನ್ನು ಅಳವಡಿಸುವ ವಿಚಾರದಲ್ಲಿ ಕಂಪನಿಯೊಂದಕ್ಕೆ ಅನುಕೂಲವಾಗುವ ಸಲುವಾಗಿ 2016–17ರ ಅವಧಿಯಲ್ಲಿ 65 ಲಕ್ಷ ಡಾಲರ್‌ ಲಂಚ ಪಡೆದಿರುವುದಕ್ಕೆ ಸಾಕಷ್ಟು ಸಾಕ್ಷ್ಯ ದೊರೆತಿರುವುದರಿಂದ ಈ ವಿಚಾರಣೆ ಎದುರಿಸುವುದು ಅಗತ್ಯ ಎಂದು ಮಲೇಷ್ಯಾ ಹೈಕೋರ್ಟ್‌ನ ನ್ಯಾಯಮೂರ್ತಿ ಮೊಹಮ್ಮದ್ ಜೈನಿ ಮಜಿಯಾನ್‌ ಹೇಳಿದ್ದಾರೆ.

ಹಲವು ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ನಜೀಬ್‌ ರಜಾಕ್‌ ಅವರು ಅಪರಾಧಿ ಎಂದು ಕಳೆದ ಜುಲೈನಲ್ಲಿ ಕೋರ್ಟ್ ತೀರ್ಪು ಪ್ರಕಟಿಸಿತ್ತು ಹಾಗೂ ಮೇಲ್ಮನವಿಗೆ ಅವಕಾಶ ಕಲ್ಪಿಸಿ, 12 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು