ಸೋಮವಾರ, ಜುಲೈ 26, 2021
26 °C

ಇಂಡೊನೇಷ್ಯಾ: ಪತ್ನಿ ವೇಷ ಧರಿಸಿ ವಿಮಾನ ಏರಿದ ಕೋವಿಡ್‌ ಸೋಂಕಿತ ವ್ಯಕ್ತಿ

ಎಪಿ Updated:

ಅಕ್ಷರ ಗಾತ್ರ : | |

Prajavani

ಟೆರ್ನೆಟ್‌: ಇಂಡೊನೇಷ್ಯಾದಲ್ಲಿ ಕೊರೊನಾ ಸೋಂಕಿತ  ವ್ಯಕ್ತಿಯೊಬ್ಬ ತನ್ನ ಹೆಂಡತಿಯ ವೇಷದಲ್ಲಿ ವಿಮಾನ ಏರಿದ್ದಾನೆ. ಇದಕ್ಕಾಗಿ ಹೆಂಡತಿಯ ನಕಲಿ ಗುರುತು ಚೀಟಿ ಮತ್ತು ಕೋವಿಡ್‌ ನೆಗೆಟಿವ್‌ ಪ್ರಮಾಣಪತ್ರವನ್ನು ಬಳಸಿದ್ದಾನೆ. ಅಲ್ಲದೆ ತನ್ನ ಮುಖವನ್ನು ಬುರ್ಕಾದಿಂದ ಮುಚ್ಚಿದ್ದಾನೆ.

ಈ ಘಟನೆ ಭಾನುವಾರ ನಡೆದಿದೆ. ಜಕಾರ್ತಾದಿಂದ ಟೆರ್ನೆಟ್‌ನತ್ತ ಪ್ರಯಾಣಿಸುತ್ತಿದ್ದ ವಿಮಾನದ ಸಿಬ್ಬಂದಿಯೊಬ್ಬರು ಆತ ಶೌಚಾಲಯದಲ್ಲಿ ಬಟ್ಟೆ ಬದಲಾಯಿಸುವುದನ್ನು ಗಮನಿಸಿದ್ದಾರೆ.

‘ವ್ಯಕ್ತಿ, ಹೆಂಡತಿಯ ಹೆಸರಿನಲ್ಲೇ ವಿಮಾನ ಟಿಕೆಟ್‌ ಖರೀದಿಸಿದ್ದಾನೆ. ಅಲ್ಲದೆ ಇದಕ್ಕಾಗಿ ಆಕೆಯ ಗುರುತಿನ ಚೀಟಿ, ಕೋವಿಡ್‌ ಪಿಸಿಆರ್‌ ಪರೀಕ್ಷೆಯ ವರದಿ ಮತ್ತು ಲಸಿಕಾ ಪ್ರಮಾಣ ಪತ್ರವನ್ನು ಕೂಡ ಬಳಸಿದ್ದಾನೆ. ಆತನನ್ನು ವಿಮಾನದಿಂದ ಇಳಿಯುತ್ತಿದ್ದಂತೆ ಬಂಧಿಸಲಾಗಿದೆ’ ಎಂದು ಟೆರ್ನೆಟ್‌ ಪೊಲೀಸ್‌ ಮುಖ್ಯಸ್ಥ ಆದಿತ್ಯ ಲಕ್ಷಿಮದ ಅವರು ತಿಳಿಸಿದರು.

‘ಆರೋಪಿಯನ್ನು ಬಳಿಕ ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿದ್ದು, ಪರೀಕ್ಷೆಯಲ್ಲಿ ಆತನಿಗೆ ಸೋಂಕು ತಗುಲಿರುವುದು ದೃಢ‍ಪಟ್ಟಿದೆ. ಸದ್ಯ ಆತನನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಈ ಬಗ್ಗೆ ತನಿಖೆಯನ್ನು ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು