ಬುಧವಾರ, ಫೆಬ್ರವರಿ 8, 2023
18 °C

Nobel Prize | ಸುಕುರೊ ಮನಬೆ ಸೇರಿ ಮೂವರು ವಿಜ್ಞಾನಿಗಳಿಗೆ ‘ಭೌತವಿಜ್ಞಾನ ನೊಬೆಲ್’

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ಸ್ಟಾಕ್‌ಹೋಮ್: ವಿಜ್ಞಾನಿಗಳಾದ ಸುಕುರೊ ಮನಬೆ, ಕ್ಲಾಸ್‌ ಹ್ಯಾಸಲ್‌ಮನ್ ಹಾಗೂ ಜಾರ್ಜಿಯೊ ಪಾರಿಸಿ ಅವರಿಗೆ ಜಂಟಿಯಾಗಿ 2021ನೇ ಸಾಲಿನ ಭೌತವಿಜ್ಞಾನ ನೊಬೆಲ್‌ ಪ್ರಶಸ್ತಿಯನ್ನು ಮಂಗಳವಾರ ಘೋಷಿಸಲಾಗಿದೆ.

‘ಸಂಕೀರ್ಣವಾಗಿರುವ ವಿಶ್ವದ ಭೌತಿಕ ರಚನೆಯ ವಿಶ್ಲೇಷಣೆ ಹಾಗೂ ಹವಾಮಾನ ಬದಲಾವಣೆ ಕುರಿತು ಕೈಗೊಂಡ ಸಂಶೋಧನೆಯನ್ನು ಪರಿಗಣಿಸಿ’ ಈ ಪ್ರಶಸ್ತಿಯನ್ನು ಜಂಟಿಯಾಗಿ ಮೂವರು ವಿಜ್ಞಾನಿಗಳಿಗೆ ನೀಡಲಾಗಿದೆ ಎಂದು ರಾಯಲ್‌ ಸ್ವೀಡಿಶ್‌ ಅಕಾಡೆಮಿ ಆಫ್‌ ಸೈನ್ಸಸ್‌ ತಿಳಿಸಿದೆ.

ಈ ಪ್ರತಿಷ್ಠಿತ ಪ್ರಶಸ್ತಿಯ ಬಹುಮಾನದ ಮೊತ್ತ ₹ 8.56 ಕೋಟಿ (1.15 ಮಿಲಿಯನ್ ಡಾಲರ್).

ಓದಿ: 

ಜಪಾನ್‌ ಮೂಲದ ಮನಬೆ ಅವರು ಅಮೆರಿಕದ ಪ್ರಿನ್ಸ್‌ಟನ್‌ ವಿಶ್ವವಿದ್ಯಾಲಯದಲ್ಲಿ ಹವಾಮಾನವಿಜ್ಞಾನ ವಿಭಾಗದಲ್ಲಿ ಹಾಗೂ ಹ್ಯಾಸಲ್‌ಮನ್‌ ಅವರು ಜರ್ಮನಿಯ ಹ್ಯಾಂಬರ್ಗನಲ್ಲಿರುವ ಮ್ಯಾಕ್ಸ್‌ ಪ್ಲ್ಯಾಂಕ್ ಇನ್ಸ್‌ಟಿಟ್ಯೂಟ್ ಆಫ್‌ ಮಿಟಿಯೊರಾಲಜಿಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ.

ಪಾರಿಸಿ ಅವರು ಅವರು ಇಟಲಿಯ ಸೇಪಿಯಂಜಾ ಯುನಿವರ್ಸಿಟಿ ಆಫ್‌ ರೋಮ್‌ನಲ್ಲಿ ಪ್ರಾಧ್ಯಾಪಕ.

ಮನಬೆ ಹಾಗೂ ಹ್ಯಾಸಲ್‌ಮನ್‌ ಅವರು ಹವಾಮಾನ ಬದಲಾವಣೆ ಕ್ಷೇತ್ರದಲ್ಲಿ ಗಮನಾರ್ಹ ಸಂಶೋಧನೆ ಕೈಗೊಂಡಿದ್ದಾರೆ.

‘ವಾತಾವರಣದಲ್ಲಿ ಇಂಗಾಲದ ಡೈಆಕ್ಸೈಡ್‌ ಮಟ್ಟದಲ್ಲಿನ ಹೆಚ್ಚಳಕ್ಕೆ ತಕ್ಕಂತೆ, ಭೂಮಿಯ ಮೇಲ್ಮೈಯ ಉಷ್ಣಾಂಶದಲ್ಲಿ ಯಾವ ರೀತಿ ಹೆಚ್ಚಳ ಕಂಡುಬರುತ್ತದೆ ಎಂಬುದನ್ನು ವಿವರಿಸುವ ಮಾದರಿಯನ್ನು ಮನಬೆ ಸಿದ್ಧಪಡಿಸಿದ್ದಾರೆ.

ಭೂಮಿಯು ಸೂರ್ಯನಿಂದ ಪಡೆಯುವ ಉಷ್ಣಶಕ್ತಿಯನ್ನು ಪುನಃ ತನ್ನ ವಾತಾವರಣದಲ್ಲಿ ಯಾವ ರೀತಿ ಪ್ರಸರಣ ಮಾಡುತ್ತದೆ ಎಂಬುದನ್ನು ವಿವರಿಸಲು ಮನಬೆ ಅವರು ‘ಭೌತಿಕ ಮಾದರಿ’ಯನ್ನು ಅಭಿವೃದ್ಧಿಪಡಿಸಿದ್ದಾರೆ.

ವಾತಾವರಣದಲ್ಲಿ ಸಾಕಷ್ಟು ಏರುಪೇರು ಕಂಡುಬಂದರೂ, ‘ಹವಾಮಾನ ಮಾದರಿ‘ಗಳು ವಿಶ್ವಾಸಾರ್ಹ ಎಂಬುದರ ಕುರಿತು ಹ್ಯಾಸಲ್‌ಮನ್ ಅವರು ಸಂಶೋಧನೆ ನಡೆಸಿದ್ದಾರೆ.

ಗಣಿತ, ಜೀವವಿಜ್ಞಾನ ಹಾಗೂ ಮಷಿನ್‌ ಲರ್ನಿಂಗ್‌ನ  ಸೂತ್ರಗಳನ್ನು ಬಳಸಿಕೊಂಡು, ವಸ್ತುಗಳ ಸಂಕೀರ್ಣ ಸಂರಚನೆಯನ್ನು ಪಾರಿಸಿ ಅವರು ವಿಶ್ಲೇಷಿಸಿದ್ದಾರೆ ಎಂದು ನೊಬೆಲ್‌ ಪ್ರಶಸ್ತಿ ಸಮಿತಿಯ ತೀರ್ಪುಗಾರರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.