ವಿಶ್ವಸಂಸ್ಥೆ ಮಾಹಿತಿ
ಲಿಬಿಯಾ ಬೋಟ್ ದುರಂತ: ಮಾಲಿಯ 22 ಮಂದಿ ಸಾವು

ಜಿನಿವಾ: ಲಿಬಿಯಾ ಕರಾವಳಿಯಲ್ಲಿ ಸಂಭವಿಸಿದ ಬೋಟ್ ದುರಂತದಲ್ಲಿ ಮಾಲಿ ದೇಶದ 22 ಮಂದಿ ವಲಸಿಗರು ಮೃತಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆ ಮಂಗಳವಾರ ತಿಳಿಸಿದೆ.
ವಲಸಿಗರು ಜೂನ್ 22ರಂದು ಲಿಬಿಯಾದ ಝುವರಾ ನಗರದಿಂದ ರಬ್ಬರ್ ಬೋಟ್‌ನಲ್ಲಿ ಪ್ರಯಾಣ ಬೆಳೆಸಿದ್ದರು. ಘಟನೆ ನಡೆದ 9 ದಿನಗಳ ಬಳಿಕ 61 ಮಂದಿಯನ್ನು ಲಿಬಿಯಾ ಕರಾವಳಿ ಪಡೆ ರಕ್ಷಿಸಿ ತೀರಕ್ಕೆ ಕರೆತಂದಿದೆ. ಬದುಕುಳಿದವರಲ್ಲಿ ಬಹುತೇಕರು ಮಾಲಿ ದೇಶದವರು ಎಂದು ವಿಶ್ವಸಂಸ್ಥೆಯ ವಲಸಿಗರ ಅಂತಾರಾಷ್ಟ್ರೀಯ ಸಂಸ್ಥೆ ತಿಳಿಸಿದೆ.
ನೀರಿನಲ್ಲಿ ಮುಳುಗಿ ಮತ್ತು ನಿರ್ಜಲೀಕರಣದಿಂದ 22 ಮಂದಿ ವಲಸಿಗರು ಮೃತಪಟ್ಟಿದ್ದಾರೆ ಎಂದು ಬದುಕುಳಿದವರು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.