ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದಲ್ಲಿ ಮಹಿಳಾ ಮಾಡೆಲ್‌ಗಳಿಗೆ ನಿಷೇಧ: ಒಳ ಉಡುಪು ಜಾಹೀರಾತಿಗೆ ಬಂದ ಪುರುಷರು

Last Updated 8 ಮಾರ್ಚ್ 2023, 14:07 IST
ಅಕ್ಷರ ಗಾತ್ರ

ಬೀಜಿಂಗ್: ಮಹಿಳಾ ಮಾಡೆಲ್‌ಗಳು ಆನ್‌ಲೈನ್‌ನಲ್ಲಿ ಒಳ ಉಡುಪು ಪ್ರದರ್ಶಿಸುವುದನ್ನು ಚೀನಾ ಸರ್ಕಾರವು ನಿಷೇಧಿಸಿರುವುದರಿಂದ, ಆ ದೇಶದ ಲೈವ್‌ಸ್ಟ್ರೀಮ್ ಫ್ಯಾಶನ್ ಕಂಪನಿಗಳು ಈ ಕೆಲಸಕ್ಕಾಗಿ ಪುರುಷರನ್ನು ನಿಯೋಜಿಸಲು ಪ್ರಾರಂಭಿಸಿವೆ.

ಬ್ರಾಗಳಿಂದ ಹಿಡಿದು ನೈಟ್‌ಗೌನ್‌ಗಳವರೆಗಿನ ವೈವಿಧ್ಯಮಯ ಒಳ ಉಡುಪುಗಳನ್ನು ಧರಿಸಿರುವ ಚೀನಿ ಪುರುಷರ ಚಿತ್ರಗಳು, ಫ್ಯಾಷನ್ ಕಂಪನಿಗಳ ಲೈವ್‌ಸ್ಟ್ರೀಮ್ ಪ್ರಸಾರದ ಸ್ಕ್ರೀನ್‌ಶಾಟ್‌ಗಳಿಂದ ಚೀನಾದ ಸಾಮಾಜಿಕ ಮಾಧ್ಯಮಗಳು ತುಂಬಿಹೋಗಿವೆ. ಕೆಲವು ಪುರುಷ ಮಾಡೆಲ್‌ಗಳು ಕ್ಯಾಟ್ ಇಯರ್ ಹೆಡ್‌ಬ್ಯಾಂಡ್‌ನೊಂದಿಗೆ ಕಾಣಿಸಿಕೊಂಡಿದ್ದಾರೆ.

ಪುರುಷ ಮಾಡೆಲ್‌ಗಳನ್ನು ಕಣಕ್ಕಿಳಿಸುವ ಮೂಲಕ ಸರ್ಕಾರದ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸುತ್ತಿರುವ ಫ್ಯಾಶನ್ ಕಂಪನಿಗಳ ಪ್ರಯತ್ನಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

‘ಇದು ವ್ಯಂಗ್ಯಮಾಡುವ ಪ್ರಯತ್ನವಲ್ಲ. ದೇಶದ ಪ್ರತಿಯೊಬ್ಬರೂ ನಿಯಮಗಳನ್ನು ಅನುಸರಿಸುವ ಬಗ್ಗೆ ತುಂಬಾ ಗಂಭೀರವಾಗಿರುತ್ತಾರೆ’ಎಂದು ಆನ್‌ಲೈನ್ ಉದ್ಯಮದ ಮಾಲೀಕರೊಬ್ಬರು ಹೇಳಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಅಂಕಿಅಂಶಗಳ ಪ್ರಕಾರ, ಚೀನಾದ ಇ ಕಾಮರ್ಸ್ ಸುಮಾರು 700 ಬಿಲಿಯನ್ ಡಾಲರ್ ಉದ್ಯಮವಾಗಿದೆ. ಈ ಉದ್ಯಮವು ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಮತ್ತಷ್ಟು ಬೆಳೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT