ಪಾಕ್ ಸೇನಾ ನೆಲೆ ಮೇಲೆ ಅಫ್ಗನ್ ಉಗ್ರರ ದಾಳಿ, 3 ಮಂದಿ ಸಾವು

ಇಸ್ಲಾಮಾಬಾದ್: ಪಾಕಿಸ್ತಾನದ ಹೊರವಲಯದ ಸೇನಾ ಠಾಣೆಯೊಂದರ ಗಡಿಯುದ್ದಕ್ಕೂ ಅಫ್ಗಾನಿಸ್ತಾನ ಭಯೋತ್ಪಾದಕರು ಭಾರಿ ಗುಂಡಿನ ದಾಳಿ ನಡೆಸಿದ್ದಾರೆ. ಇದರಿಂದ ಮೂರು ಸೇನಾ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಸೇನೆ ಶನಿವಾರ ಹೇಳಿದೆ.
ಪಾಕಿಸ್ತಾನದ ಕಡಿದಾದ ವಜೀರಿಸ್ತಾನ್ ಪ್ರದೇಶದಲ್ಲಿಯ ಪಾಕಿಸ್ತಾನ ಸೇನಾ ಠಾಣೆಯ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ. ಇದರಿಂದ ಹಲವರು ಸಾವನ್ನಪ್ಪಿದ್ದಾರೆ. ದಾಳಿಯ ಕುರಿತು ಹೆಚ್ಚಿನ ಮಾಹಿತಿ ತಕ್ಷಣಕ್ಕೆ ಲಭ್ಯವಾಗಿಲ್ಲ ಎಂದು ಸೇನಾ ಹೇಳಿಕೆ ತಿಳಿಸಿದೆ.
ಅಫ್ಗಾನಿಸ್ತಾನ ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದ ಮೇಲೆ ಸರಣಿ ದಾಳಿಗಳನ್ನು ನಡೆಸುತ್ತಿದೆ. ಉತ್ತರ ಕುಂದುಜ್ ಪ್ರಾಂತ್ಯದಲ್ಲಿಯ ಮಸೀದಿಯೊಂದರ ಮೇಲೆ ಶುಕ್ರವಾರ ಬಾಂಬ್ ನಡೆಸಲಾಗಿತ್ತು. ದುರಂತದಲ್ಲಿ ಸಮೀಪದ ಮದರಸಾದಲ್ಲಿಯ ವಿದ್ಯಾರ್ಥಿಗಳು ಸೇರಿ 33 ಜನ ಮೃತಪಟ್ಟಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.