ಮಂಗಳವಾರ, ಸೆಪ್ಟೆಂಬರ್ 21, 2021
21 °C

ಉದ್ಯೋಗ ನಷ್ಟ: ಸಿಂಗಪುರದಿಂದ ಭಾರತದ ನೌಕರರು ವಾಪಸ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಸಿಂಗಪುರ: ಕೋವಿಡ್‌ 19 ಪಿಡುಗಿನ ಪರಿಣಾಮದಿಂದಾಗಿ ಇಲ್ಲಿ ವ್ಯವಹಾರ ಕುಂಠಿತಗೊಂಡಿರುವುದರಿಂದ ಅನೇಕ ಭಾರತೀಯರು ಕೆಲಸ ಕಳೆದುಕೊಂಡಿದ್ದು ಭಾರತಕ್ಕೆ ಹಿಂತಿರುಗುತ್ತಿದ್ದಾರೆ.

ತಾಯ್ನಾಡಿಗೆ ಮರಳಲು ಇಲ್ಲಿನ ಹೈಕಮಿಷನ್‌ ಕಚೇರಿಯಲ್ಲಿ ಪ್ರತಿ ದಿನ ಭಾರತದ ಅಂದಾಜು 100 ಮಂದಿ ತಮ್ಮ ಹೆಸರು ನೋಂದಾಯಿಸುತ್ತಿದ್ದಾರೆ. ಈವರೆಗೆ 11,000 ಮಂದಿ ನೋಂದಣಿ ಮಾಡಿದ್ದಾರೆ ಎಂದು ಭಾರತದ ಹೈಕಮಿಷನರ್‌ ಪಿ. ಕುಮಾರನ್‌ ಬುಧವಾರ ತಿಳಿಸಿದ್ದಾರೆ.

ವಂದೇ ಭಾರತ್‌ ಮಿಷನ್‌ ಮೂಲಕ ವಿಶೇಷ ವಿಮಾನಗಳನ್ನು ವ್ಯವಸ್ಥೆ ಮಾಡಲಾಗಿದೆ.  ಉದ್ಯೋಗ ನಷ್ಟ ಅಥವಾ ವೈದ್ಯಕೀಯ ಚಿಕಿತ್ಸೆ ಅಥವಾ ಕುಟುಂಬದ ಸಂಕಷ್ಟ ಸ್ಥಿತಿ  ಕಾರಣ ಹೆಚ್ಚು ಜನರು ವಾಪಸಾಗುತ್ತಿರುವುದರಿಂದ  ಮತ್ತಷ್ಟು ಹೆಚ್ಚು ವಿಮಾನಗಳು ಇಲ್ಲಿಂದ ಭಾರತಕ್ಕೆ ಹಾರಲು ಸಜ್ಜಾಗಿವೆ ಎಂದು ಅವರು ಹೇಳಿದ್ದಾರೆ.

ಸಿಂಗಪುರ– ಭಾರತ ಮಧ್ಯೆ ಈ ಮೊದಲು ಅಧಿಕೃತವಾಗಿ ಸಂಚರಿಸುತ್ತಿದ್ದ ವಿಮಾನಗಳ ಹಾರಾಟ ಇನ್ನೂ ಪುನರಾರಂಭ ಆಗಿಲ್ಲ. ಆದರೂ ಭಾರತೀಯರನ್ನು ಮರಳಿ ಕಳುಹಿಸಲು ಅಗತ್ಯ ವಿಮಾನಗಳ ಹಾರಾಟಕ್ಕೆ ಹೈ ಕಮಿಷನ್‌ ಕ್ರಮ ಕೈಗೊಳ್ಳುವುದು ಎಂದು ಭರವಸೆ ನೀಡಿದ್ದಾರೆ.

ಮೇ ತಿಂಗಳಿನಿಂದ ಈವರೆಗೆ 120 ವಿಶೇಷ ವಿಮಾನಗಳ ಮೂಲಕ ಭಾರತದ ಸುಮಾರು 17,000  ಪ್ರಜೆಗಳು ತವರಿಗೆ ಮರಳಲು ಅವಕಾಶ ಕಲ್ಪಿಸಲಾಗಿದೆ.

ಇಲ್ಲಿನ ಭಾರತೀಯ ಹೈ ಕಮಿಷನ್‌ನ ಹೊಸ ಸಂಕೀರ್ಣ ಮುಂದಿನ ಮೂರು ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಅವರು ವಿವರಿಸಿದ್ದಾರೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು