ಸೋಮವಾರ, ಮೇ 23, 2022
26 °C

ಪಾಕಿಸ್ತಾನದಲ್ಲಿ ಹಿಂದೂ ದೇವಾಲಯಗಳು ದುಸ್ಥಿತಿಯಲ್ಲಿವೆ: ಆಯೋಗ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿದ ದೇವಾಲಯಗಳು ದುಸ್ಥಿತಿಯಲ್ಲಿವೆ. ಇದಕ್ಕೆ ಅಧಿಕಾರಿಗಳೇ ಹೊಣೆ. ಪುರಾತನ ಪೂಜಾ ಸ್ಥಳಗಳನ್ನು ಸಂರಕ್ಷಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

‘ಫೆಬ್ರುವರಿ 5 ರಂದು ಏಕ ವ್ಯಕ್ತಿಯ ಆಯೋಗವು ಈ ಬಗ್ಗೆ ಸುಪ್ರೀಂಕೋರ್ಟ್‌ಗೆ ವರದಿಯನ್ನು ಸಲ್ಲಿಸಿದೆ. ಈ ವರದಿಯೊಂದಿಗೆ ಹಾನಿಗೊಳಗಾಗಿರುವ ದೇವಾಲಯಗಳ ಛಾಯಚಿತ್ರಗಳನ್ನು ಕೂಡ ಲಗತ್ತಿಸಲಾಗಿದೆ’ ಎಂದು ‘ಡಾನ್‌’ ಪತ್ರಿಕೆ ವರದಿ ಮಾಡಿದೆ.

‘ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್(ಇಟಿಪಿಬಿ) ಅಲ್ಪಸಂಖ್ಯಾತರ ದೇವಾಲಯಗಳನ್ನು ಸಂರಕ್ಷಿಸುವಲ್ಲಿ ವಿಫಲವಾಗಿದೆ’ ಎಂದು ವರದಿಯಲ್ಲಿ ಹೇಳಲಾಗಿದೆ.

ಡಾ. ಸೋಹಿಬ್‌ ಸುದ್ದೆಲ್‌ ಅವರ ಏಕ ವ್ಯಕ್ತಿಯ ಆಯೋಗವನ್ನು ಸುಪ್ರೀಂಕೋರ್ಟ್‌ ರಚಿಸಿತ್ತು. ಆದರೆ, ಈ  ಆಯೋಗಕ್ಕೆ ನೆರವಾಗಲು ಮೂವರು ಸದಸ್ಯರನ್ನು ನೇಮಿಸಲಾಗಿತ್ತು.

ಜನವರಿ 6 ರಂದು ಚಕಾವಲ್‌ನ ಕಟಾಸ್‌ ರಾಜ್‌ ಮಂದಿರ ಮತ್ತು ಜನವರಿ 7 ರಂದು ಮುಲ್ತಾನ್‌ನ ಪ್ರಹ್ಲಾದ್‌ ಮಂದಿರಕ್ಕೆ ಆಯೋಗದ ಸದಸ್ಯರು ಭೇಟಿ ನೀಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು