ಶನಿವಾರ, ಮಾರ್ಚ್ 25, 2023
24 °C

3 ಕಿ.ಮೀ ಎತ್ತರಕ್ಕೆ ವ್ಯಾಪಿಸಿದ್ದ ಬೂದಿ: ಮೌಂಟ್ ಎಟ್ನಾ ರುದ್ರಾವತಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಟಲಿಯ ಆಗಸ ಅಕ್ಷರಶಃ ಬೆಂಕಿಮಯವಾಗಿತ್ತು. ಜೀವಂತ ಜ್ವಾಲಾಮುಖಿ ಮೌಂಟ್ ಎಟ್ನಾ ಚಿಮ್ಮುತ್ತಿದ್ದ ಬೆಂಕಿ ಉಂಡೆಗಳು, ಬೂದಿ ಆಗಸವನ್ನು ಆವರಿಸಿದ್ದವು. ಕೊತ ಕೊತ ಕುದಿಯುತ್ತಿದ್ದ ಜ್ವಾಲಾಮುಖಿ ತನ್ನ ಒಡಲಿಂದ ಲಾವಾರಸವನ್ನು ಉಗುಳಿದೆ. ಎಟ್ನಾ ಜ್ವಾಲಾಮುಖಿಯ ರೌದ್ರಾವತಾರದ ವಿಡಿಯೋ ವೈರಲ್ ಆಗಿದೆ.

ಸಿಸಿಲಿಯ ಮೆಡಿಟೇರಿಯನ್ ದ್ವೀಪದಲ್ಲಿರುವ ಈ ಜ್ವಾಲಾಮುಖಿ ಆಗಾಗ್ಗೆ ಬೆಂಕಿ ಉಗುಳುತ್ತಿರುತ್ತದೆ. ಇದೀಗ, ಲಾವಾ ರಸದ ನದಿ ಹರಿಯುತ್ತಿದೆ.

ದಿ ಸನ್ ವರದಿ ಪ್ರಕಾರ, ಎಟ್ನಾ ಜ್ವಾಲಾಮುಖಿ ಉಗುಳಿದ ಲಾವಾ ರಸ 100 ಮೀಟರ್ ಅಗಲ, ಬೂದಿ, ಬೆಂಕಿ 3 ಕಿ.ಮೀ ಎತ್ತರದವರೆಗೂ ಆವರಿಸಿದ್ದವು.

ಇಟಲಿಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಜಿಯೋಫಿಸಿಕ್ಸ್ ಮತ್ತು ವಲ್ಕ್ಯಾನಾಲಜಿಯ ಜ್ವಾಲಾಮುಖಿ ತಜ್ಞ ಬೋರಿಸ್ ಬೆಹ್ನ್ಕೆ ಈ ಸ್ಫೋಟಕ್ಕೆ ಸಾಕ್ಷಿಯಾಗಿದ್ದಾರೆ ಎಂದು ದಿ ಮೆಟ್ರೋ ವರದಿ ಮಾಡಿದೆ. ಜ್ವಾಲಾಮುಖಿಯ ವಿಡಿಯೋ ಚಿತ್ರೀಕರಿಸಿದ ಬೋರಿಸ್ ಟ್ವಿಟ್ಟರಲ್ಲಿ ಪೋಸ್ಟ್ ಮಾಡಿದ್ದಾರೆ.

ಜ್ವಾಲಾಮುಖಿ ಚಿಮ್ಮುವುದಕ್ಕೂ ಮುನ್ನ ಮೆಡಿಟೇರಿಯನ್ ದ್ವೀಪದಲ್ಲಿ 2.7 ತೀವ್ರತೆಯ ಭೂಕಂಪ ಸಂಭವಿಸಿದೆ. 459 ಚದರ ಮೈಲಿ ವ್ಯಾಪಿಸಿರುವ ಈ ಜ್ವಾಲಾಮುಖಿ, 10,992 ಅಡಿ ಎತ್ತರಕ್ಕೆ ಚಿಮ್ಮಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು