ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವಿಟರ್‌ ಕಚೇರಿ ಕೋಣೆಗಳನ್ನು ಬೆಡ್‌ರೂಂ ಆಗಿ ಪರಿವರ್ತಿಸಿದ ಮಸ್ಕ್‌

Last Updated 6 ಡಿಸೆಂಬರ್ 2022, 6:40 IST
ಅಕ್ಷರ ಗಾತ್ರ

‌ಸ್ಯಾನ್‌ ಫ್ರಾನ್ಸಿಸ್ಕೊ: ತನ್ನ ಕಂಪನಿ ಉದ್ಯೋಗಿಗಳಿಗೆ ಕಠಿಣವಾಗಿ ಕೆಲಸ ಮಾಡಿ ಅಥವಾ ಕಂಪನಿ ಬಿಟ್ಟು ಹೋಗಿ ಎಂದು ಕರೆ ನೀಡಿದ್ದ ಟ್ವಿಟರ್‌ ಮುಖ್ಯಸ್ಥ ಇಲಾನ್‌ ಮಸ್ಕ್‌, ಇದೀಗ ಕಂಪನಿಯ ಕೇಂದ್ರ ಕಚೇರಿ ಕೋಣೆಗಳನ್ನು ಬೆಡ್‌ರೂಂ ಆಗಿ ಪರಿವರ್ತಿಸಿದ್ದಾರೆ ಎಂದು ಫೋರ್ಬ್ಸ್‌ ವರದಿ ಮಾಡಿದೆ.


ರಾತ್ರಿ ಪೂರ್ತಿ ಕಠಿಣವಾಗಿ ಕೆಲಸ ಮಾಡುವ ಉದ್ಯೋಗಿಗಳಿಗಾಗಿ ಕಚೇರಿಯಲ್ಲಿನ ಕೋಣೆಗಳನ್ನು ಸಣ್ಣ ಬೆಡ್‌ ರೂಂಗಳಾಗಿ ಪರಿವರ್ತಿಸಿ ಬೆಡ್‌, ಕಂಪ್ಯೂಟರ್‌, ಕರ್ಟನ್‌ಗಳನ್ನು ಕೋಣೆಯಲ್ಲಿ ಅಳವಡಿಸಲಾಗಿದೆ ಎಂದು ವರದಿ ಹೇಳಿದೆ.


ಸೋಮವಾರ ಕಚೇರಿ ಆಗಮಿಸಿದ ಉದ್ಯೋಗಿಗಳಿಗೆ ಸಣ್ಣ,ಸಣ್ಣ ಮಲಗುವ ಕೋಣೆಗಳಾಗಿ ಕಚೇರಿ ಬದಲಾಗಿರುವುದು ಕಂಡು ಅಚ್ಚರಿಯಾಗಿದೆ. ಕೆಲಸದ ಸ್ಥಳ ಮತ್ತು ವಿಶ್ರಾಂತಿ ಕೋಣೆಯನ್ನಾಗಿ ಬಳಸುವ ರೀತಿಯಲ್ಲಿ ಈ ಬೆಡ್‌ ರೂಂ ವಿನ್ಯಾಸಗೊಳಿಸಲಾಗಿದೆ ಎಂದು ಮೂಲಗಳು ಹೇಳಿವೆ.


ಆದರೆ ಈ ಬಗ್ಗೆ ಕಂಪನಿಯಿಂದ ಅಥವಾ ಮಸ್ಕ್ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಲಭಿಸಿಲ್ಲ. ಉದ್ಯೋಗಿಗಳಿಗೆ ಮಾಹಿತಿ ನೀಡದೇ ಈ ರೀತಿ ಮಾಡಿರುವುದು ಸರಿಯಲ್ಲ ಎಂದು ಕೆಲ ಉದ್ಯೋಗಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂಬುದಾಗಿ ವರದಿ ತಿಳಿಸಿದೆ.
ಪ್ರತಿ ಅಂತಸ್ತಿನಲ್ಲಿ ಈ ರೀತಿ 4–8 ಕೋಣೆ ಸಿದ್ಧಪಡಿಸಲಾಗಿದೆ. ಅತ್ಯಂತ ಪರಿಶ್ರಮದಿಂದ ಕೆಲಸ ಮಾಡುವಂತೆ ಮಸ್ಕ್‌ ಹಿಂದಿನ ತಿಂಗಳು ತನ್ನ ಕಂಪನಿ ಉದ್ಯೋಗಿಗಳಿಗೆ ಕರೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT