ಮ್ಯಾಂಡಲೆ, ಮ್ಯಾನ್ಮಾರ್: ಪದಚ್ಯುತ ನಾಯಕಿ ಆಂಗ್ ಸಾನ್ ಸೂ ಕಿ ಅವರಿಗೆ ಐದು ಲಕ್ಷಕ್ಕೂ ಅಧಿಕ ಡಾಲರ್ಅನ್ನು ನಗದು ರೂಪದಲ್ಲಿ ಪಾವತಿಸಿದ್ದಾಗಿ ನಿರ್ಮಾಣ ಕ್ಷೇತ್ರದ ಪ್ರಮುಖ ಉದ್ಯಮಿಯೊಬ್ಬರು ಹೇಳಿದ್ದಾರೆ.

ಉದ್ಯಮಿ ಮೌಂಗ್ ವೇಕ್ ಈ ಹೇಳಿಕೆ ನೀಡಿದ್ದು, ಸರ್ಕಾರಿ ಒಡೆತನದ ಟಿ.ವಿ ಚಾನೆಲ್ನಲ್ಲಿ ಇದು ಪ್ರಸಾರವಾಗಿದೆ. ವೇಕ್ ಅವರು ಮಿಲಿಟರಿ ಅಧಿಕಾರಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದೆ.

ಸೂ ಕಿ ವಿರುದ್ಧ ಮತ್ತಷ್ಟು ಗಂಭೀರ ಆರೋಪಗಳನ್ನು ಹೊರಿಸಲು ಉದ್ಯಮಿಯ ಈ ಹೇಳಿಕೆ ಕಾರಣವಾಗಲಿದೆ ಎಂದೂ ಹೇಳಲಾಗುತ್ತಿದೆ.

ಡ್ರಗ್ಸ್ ಸಾಗಣೆ ಪ್ರಕರಣದಲ್ಲಿ ವೇಕ್ ಅವರಿಗೆ ಈ ಹಿಂದೆ ಶಿಕ್ಷೆ ವಿಧಿಸಲಾಗಿತ್ತು. ‘ತನ್ನ ವ್ಯವಹಾರ ಸುಸೂತ್ರವಾಗಿ ನಡೆಯಲು ಸಹಕಾರ ನೀಡುವ ಸಂಬಂಧ ಹಲವಾರು ಸಚಿವರಿಗೆ ಹಣ ಪಾವತಿಸಿದ್ದೆ. ಸೂ ಕಿ ಅವರು ತಮ್ಮ ತಾಯಿಯ ಹೆಸರಿನಲ್ಲಿ ಸ್ಥಾಪಿಸಿರುವ ಚಾರಿಟಬಲ್ಗೆ 2018ರಲ್ಲಿ ಒಂದು ಲಕ್ಷ ಅಮೆರಿಕನ್ ಡಾಲರ್ ನೀಡಿದ್ದೆ’ ಎಂದೂ ವೇಕ್ ಹೇಳಿದ್ದಾರೆ.

ಸೂ ಕಿ ಅವರನ್ನು ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಲುಕಿಸಲು ಮಿಲಿಟರಿ ಪ್ರಯತ್ನಿಸುತ್ತಿದೆ. ರಾಜಕೀಯ ಪಕ್ಷವೊಂದರಿಂದ ಬಹುಮೌಲ್ಯದ ಚಿನ್ನದ ಗಟ್ಟಿಗಳನ್ನು ಸೂ ಕಿ ಪಡೆದಿದ್ದಾರೆ ಎಂದು ಮಿಲಿಟರಿಈಗಾಗಲೇ ಆರೋಪಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.