ಮಂಗಳವಾರ, ಮೇ 17, 2022
29 °C

ಮ್ಯಾನ್ಮಾರ್: ಇಂಟರ್‌ನೆಟ್ ದೊರೆಯದಿದ್ದರೂ ಜನರು ಸಂವಹನ ನಡೆಸುತ್ತಿರುವುದು ಹೇಗೆ?

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

myanmar military coup

ಯಾಂಗೂನ್: ಮ್ಯಾನ್ಮಾರ್‌ನಲ್ಲಿ ತುರ್ತು ಪರಿಸ್ಥಿತಿ ಜಾರಿಯಲ್ಲಿದ್ದು, ಆಡಳಿತವು ಸೇನೆಯ ಹಿಡಿತದಲ್ಲಿದೆ. ತಾತ್ಕಾಲಿಕವಾಗಿ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಆದರೂ ಅಲ್ಲಿನ ಜನರು ಪರಸ್ಪರ ಸಂದೇಶಗಳನ್ನು ಕಳುಹಿಸಲು ಮಾರ್ಗವೊಂದನ್ನು ಕಂಡುಕೊಂಡಿದ್ದಾರೆ!

ದೇಶದ ಆಡಳಿತವನ್ನು ಸೇನೆಯು ಹಿಡಿತಕ್ಕೆ ಪಡೆದುಕೊಂಡ ಕೆಲವೇ ಗಂಟೆಗಳಲ್ಲಿ ಮ್ಯಾನ್ಮಾರ್‌ನಲ್ಲಿ ಆಫ್‌ಲೈನ್ ಮೆಸೇಜಿಂಗ್ ಆ್ಯಪ್ ‘ಬ್ರಿಡ್ಜ್‌ಫೀ’ಯನ್ನು 6 ಲಕ್ಷಕ್ಕೂ ಹೆಚ್ಚು ಮಂದಿ ಡೌನ್‌ಲೋಡ್ ಮಾಡಿಕೊಂಡಿದ್ದಾರೆ ಎಂದು ಕಂಪನಿ ತಿಳಿಸಿದೆ.

ಓದಿ: 

‘ಬ್ರಿಡ್ಜ್‌ಫೀ’ ಮೆಕ್ಸಿಕೊ ಮೂಲದ ನವೋದ್ಯಮ (ಸ್ಟಾರ್ಟಪ್) ಕಂಪನಿಯಾಗಿದ್ದು, 2020ರಲ್ಲಿ ಹಾಂಕಾಂಗ್‌ನಲ್ಲಿ ಪ್ರಜಾಪ್ರಭುತ್ವದ ಪರ ನಡೆ ಪ್ರತಿಭಟನೆಗಳ ಸಂದರ್ಭ ಜನಪ್ರಿಯತೆ ಗಳಿಸಿತ್ತು. ಸಂಕಷ್ಟದ ಸಂದರ್ಭದಲ್ಲಿ ಮ್ಯಾನ್ಮಾರ್ ಜನತೆಗೆ ನಮ್ಮ ಆ್ಯಪ್ ಉಪಯೋಗಕ್ಕೆ ಬರುವ ವಿಸ್ವಾಸವಿದೆ ಎಂದು ‘ಬ್ರಿಡ್ಜ್‌ಫೀ’ ಟ್ವೀಟ್ ಮಾಡಿದೆ.

ಸ್ಟೇಟ್‌ ಕೌನ್ಸಿಲರ್‌ ಆಂಗ್‌ ಸಾನ್‌ ಸೂ ಕಿ ಸೇರಿದಂತೆ ಪ್ರಮುಖ ನಾಯಕರನ್ನು ಸೇನೆಯು ಸೋಮವಾರ ವಶಕ್ಕೆ ಪಡೆದ ಬೆನ್ನಲ್ಲೇ ಯಾಂಗೂನ್ ನಗರ, ರಾಜಧಾನಿ ನೇಪಿತಾವ್‌ ಹಾಗೂ ಇತರ ಕೆಲವು ಪ್ರಮುಖ ಪ್ರದೇಶಗಳಲ್ಲಿ ಇಂಟರ್‌ನೆಟ್ ಸಂಪರ್ಕ ಕಡಿತಗೊಳಿಸಲಾಗಿತ್ತು.

ಓದಿ: 

ಸೋಮವಾರ ಸಂಜೆ ವೇಳೆಗೆ ಸಂವಹನಕ್ಕೆ ಅನುವು ಮಾಡಿಕೊಡಲಾಗಿತ್ತು. ಆ ಸಂದರ್ಭದಲ್ಲಿ ಮ್ಯಾನ್ಮಾರ್‌ನ ಹೋರಾಟಗಾರರು ಸಾಮಾಜಿಕ ಮಾಧ್ಯಮಗಳ ಮೂಲಕ ‘ಬ್ರಿಡ್ಜ್‌ಫೀ’ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವಂತೆ ಹಾಗೂ ಮತ್ತೆ ಸಂವಹನ ಸೇವೆಗಳನ್ನು ಸ್ಥಗಿತಗೊಳಿಸಿದಲ್ಲಿ ಇದು ನೆರವಾಗಬಹುದು ಎಂಬ ಸಂದೇಶಗಳನ್ನು ಪೋಸ್ಟ್ ಮಾಡಿದ್ದರು.

ಇನ್ನಷ್ಟು...

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು