ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾನ್ಮಾರ್‌ನಲ್ಲಿ ತೀವ್ರಗೊಂಡ ಪ್ರತಿಭಟನೆ

Last Updated 13 ಫೆಬ್ರುವರಿ 2021, 15:21 IST
ಅಕ್ಷರ ಗಾತ್ರ

ಯಾಂಗೂನ್: ಹಿರಿಯ ನಾಯಕಿ ಆಂಗ್ ಸಾನ್ ಸೂಕಿ ಅವರನ್ನು ಬಿಡುಗಡೆ ಮಾಡಬೇಕು ಎಂದು ವಿಶ್ವಸಂಸ್ಥೆ ಒತ್ತಾಯಿಸಿದ ಬೆನ್ನಲ್ಲೇ ಮ್ಯಾನ್ಮಾರ್‌ನಲ್ಲಿ ಮಿಲಿಟರಿ ಆಡಳಿತ ವಿರೋಧಿಸಿ ನಡೆದಿರುವ ಪ್ರತಿಭಟನೆ ಶನಿವಾರ ತೀವ್ರಗೊಂಡಿದೆ. ಹೋರಾಟಗಾರರು ತಮ್ಮ ಬಂಧನವನ್ನು ತಡೆಯಲು ಸ್ವಯಂಪ್ರೇರಿತವಾಗಿ ಕಾವಲು ಗುಂಪುಗಳನ್ನುರಚಿಸಿಕೊಂಡಿದ್ದಾರೆ.

ಕಳೆದ ವಾರ ಸೇನೆಯು ಚುನಾಯಿತ ಸರ್ಕಾರ ಕಿತ್ತುಹಾಕಿ ಆಡಳಿತವನ್ನು ತನ್ನ ಸುಪರ್ದಿಗೆ ಪಡೆದುಕೊಂಡಿದೆ. ಇದರಿಂದ ರಾಷ್ಟ್ರದಾದ್ಯಂತ ಪ್ರತಿಭಟನೆಗಳು ತೀವ್ರಗೊಂಡಿವೆ. ಸೂಕಿ ಮತ್ತು ನ್ಯಾಷನಲ್‌ ಲೀಗ್ ಫಾರ್ ಡೆಮಾಕ್ರಸಿ (ಎನ್‌ಎಲ್‌ಡಿ) ಪಕ್ಷದ ಇತರ ನಾಯಕರನ್ನು ಸೇನೆ ಬಂಧಿಸಿದ ನಂತರ ಸರ್ಕಾರಿ ಅಧಿಕಾರಿಗಳು, ವೈದ್ಯರು ಮತ್ತಿತರರು ಪ್ರತಿಭಟನೆಗೆ ಧುಮಿಕಿದ್ದಾರೆ. ಈ ಪ್ರತಿಭಟನಕಾರರನ್ನು ಬಂಧಿಸಲು ಸೇನೆ ಮುಂದಾಗಿದೆ.

ಈವರೆಗೆ 320 ಮಂದಿಯನ್ನು ಬಂಧಿಸಲಾಗಿದೆ. ಪ್ರತಿಭಟನಕಾರರನ್ನು ಚದುರಿಸಲು ಗಾಳಿಯಲ್ಲಿ ಗುಂಡು ಹಾರಿಸುವುದು, ಜಲಫಿರಂಗಿ ಪ್ರಯೋಗಿಸುವುದನ್ನು ಮುಂದುವರಿಸಲಾಗಿದೆ. ಮ್ಯಾನ್ಮಾರ್‌ನ ಬಹುತೇಕ ನಗರಗಳಲ್ಲಿ ಪ್ರತಿಭಟನೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT