ಭಾನುವಾರ, ಮೇ 16, 2021
29 °C

ರಷ್ಯಾ: ಸಾವಿನ ಅಂಚಿನಲ್ಲಿ ಪುಟಿನ್‌ ಕಡು ವಿರೋಧಿ ಅಲೆಕ್ಸಿ ನವಾಲ್ನಿ

ಎಪಿ Updated:

ಅಕ್ಷರ ಗಾತ್ರ : | |

Prajavani

ಮಾಸ್ಕೊ: ‘ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ಅವರ ಕಡು ವೈರಿ ಎಂದೇ ಬಿಂಬಿತರಾಗಿರುವ ಹಾಗೂ ಬಂಧನದಲ್ಲಿರುವ ರಷ್ಯಾದ ವಿರೋಧ ಪಕ್ಷದ ನಾಯಕ ಅಲೆಕ್ಸಿ ನವಾಲ್ನಿ (44) ಅವರ ಆರೋಗ್ಯ ಪರಿಸ್ಥಿತಿ ಹದಗೆಡುತ್ತಿದೆ. ಅವರು ಸಾವಿನ ಅಂಚಿನಲ್ಲಿದ್ದಾರೆ’ ಎಂದು ವೈದ್ಯರೊಬ್ಬರು ತಿಳಿಸಿದ್ದಾರೆ.

‘ಜೈಲಿನಲ್ಲಿ ನನ್ನ ವೈಯಕ್ತಿಕ ವೈದ್ಯರುಗಳನ್ನು ಭೇಟಿ ಮಾಡಲು ಅವಕಾಶ ನೀಡಬೇಕು’ ಎಂದು ಆಗ್ರಹಿಸಿ ಕಳೆದ ಮೂರು ವಾರಗಳಿಂದ ಅಲೆಕ್ಸಿ ನವಾಲ್ನಿ ಅವರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಇದು ಅವರ ದೇಹದ ಸ್ಥಿತಿಯನ್ನು ಇನ್ನಷ್ಟು ಜರ್ಜರಿತಗೊಳಿಸಿದೆ.

‘ನವಾಲ್ನಿ ಆರೋಗ್ಯದ ಪರೀಕ್ಷೆಗಳ ವರದಿಯನ್ನು ಅವರ ಕುಟುಂಬದವರು ನನಗೆ ನೀಡಿದ್ದರು. ನವಾಲ್ನಿ ಅವರ ದೇಹದಲ್ಲಿ ಪೊಟ್ಯಾಸಿಯಂ ಪ್ರಮಾಣ ಹೆಚ್ಚುತ್ತಿರುವುದು ವರದಿಯಿಂದ ತಿಳಿದುಬಂದಿದೆ. ಇದು ಹೃದಯಾಘಾತಕ್ಕೆ ಕಾರಣವಾಗಬಹುದು. ಅಲ್ಲದೆ ಇದರಿಂದಾಗಿ ಮೂತ್ರಪಿಂಡವನ್ನು ದುರ್ಬಲಗೊಳಿಸುವ ಕ್ರಿಯೇಟಿನೈನ್ ಮಟ್ಟವೂ ಹೆಚ್ಚಬಹುದು. ಹಾಗಾಗಿ ನವಾಲ್ನಿ ಯಾವ ಕ್ಷಣದಲ್ಲೂ ಸಾವಿಗೀಡಾಗಬಹುದು’ ಎಂದು ವೈದ್ಯ ಯಾರೋಸ್ಲಾವ್ ಆಶಿಕ್ಮಿನ್ ಶನಿವಾರ ಮಾಹಿತಿ ನೀಡಿದರು.

ಈ ಬಗ್ಗೆ ಯಾರೋಸ್ಲಾವ್‌ ಅವರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.

‘ಇದು ಸರಿಯಾದ ನಡೆಯಲ್ಲ. ಇದು ಅನ್ಯಾಯ’ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ವರದಿಗಾರರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ... Covid-19 India Update: 2.61 ಲಕ್ಷ ಹೊಸ ಪ್ರಕರಣ, 1,501 ಮಂದಿ ಸಾವು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು