ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹವಾಮಾನ ಬದಲಾವಣೆ | ಭಾರತದಲ್ಲಿ 50 ಲಕ್ಷ ಜನ ಸ್ಥಳಾಂತರ: ವಿಶ್ವಸಂಸ್ಥೆ ವರದಿ

Last Updated 17 ಜೂನ್ 2022, 14:07 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ:ಹವಾಮಾನ ಬದಲಾವಣೆ ಮತ್ತು ಇತರ ವಿಪತ್ತುಗಳಿಂದ 2021ರಲ್ಲಿ ಭಾರತದಲ್ಲಿ ಸುಮಾರು 50 ಲಕ್ಷ ಜನರು ಆಂತರಿಕವಾಗಿ ವಿವಿಧೆಡೆ ಸ್ಥಳಾಂತರಗೊಂಡಿದ್ದಾರೆ ಎಂದು ವಿಶ್ವಸಂಸ್ಥೆ ವರದಿ ತಿಳಿಸಿದೆ.

ಯುಎನ್‌ಎಚ್‌ಸಿಆರ್ ವಾರ್ಷಿಕ ವರದಿ ಪ್ರಕಾರ, ಕಳೆದ ವರ್ಷ ಹಿಂಸಾಚಾರ, ಮಾನವ ಹಕ್ಕು ಉಲ್ಲಂಘನೆ, ಆಹಾರ ಅಭದ್ರತೆ, ಹವಾಮಾನ ಬಿಕ್ಕಟ್ಟು, ಉಕ್ರೇನ್‌ನಲ್ಲಿನ ಯುದ್ಧ ಮತ್ತು ಆಫ್ರಿಕಾ– ಅಫ್ಗಾನಿಸ್ತಾನದಲ್ಲಿ ಇತರೆ ತುರ್ತು ಪರಿಸ್ಥಿತಿಗಳಿಂದ ಜಾಗತಿಕವಾಗಿ 10 ಕೋಟಿ ಜನರು ತಮ್ಮ ಮನೆ ತೊರೆಯುವಂತಾಗಿದೆ ಎಂದು ಹೇಳಿದೆ.

ಐಡಿಎಂಸಿ ಪ್ರಕಾರ 2021ರಲ್ಲಿ ವಿವಿಧ ವಿಪತ್ತುಗಳಿಂದಾಗಿ ಜಾಗತಿಕವಾಗಿ 2.37 ಕೋಟಿ ಜನರು ಆಂತರಿಕ ಸ್ಥಳಾಂತರ ಸಂಭವಿಸಿವೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ 70 ಲಕ್ಷ ಅಥವಾ ಶೇಕಡಾ 23ರಷ್ಟು ಕಡಿಮೆಯಾಗಿದೆ.ಆಂತರಿಕವಾಗಿ ಸ್ಥಳಾಂತರಗೊಂಡವರಲ್ಲಿ ಹಲವರು ತಮ್ಮ ಮನೆ ಮತ್ತು ಪ್ರದೇಶಗಳಿಗೆ ಮರಳಿದ್ದಾರೆ.

2021ರಲ್ಲಿ ವಿಪತ್ತು ಸಂದರ್ಭದಲ್ಲಿ ಅತಿದೊಡ್ಡ ಸ್ಥಳಾಂತರ ಚೀನಾ (60 ಲಕ್ಷ), ಫಿಲಿಪ್ಪೀನ್ಸ್‌ (57 ಲಕ್ಷ ) ಮತ್ತು ಭಾರತದಲ್ಲಿ (49 ಲಕ್ಷ) ಸಂಭವಿಸಿವೆ ಎಂದು ವರದಿ ಉಲ್ಲೇಖಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT