ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಹೆಚ್ಚಳ: ಭಾರತದೊಂದಿಗಿನ 22 ಗಡಿಗಳನ್ನು ಮುಚ್ಚಿದ ನೇಪಾಳ

Last Updated 1 ಮೇ 2021, 11:21 IST
ಅಕ್ಷರ ಗಾತ್ರ

ಕಠ್ಮಂಡು: ದೇಶದಲ್ಲಿ ಕೋವಿಡ್‌ ಪ್ರಕರಣಗಳು ಏರುತ್ತಿರುವ ಹಿನ್ನೆಲೆಯಲ್ಲಿ ಭಾರತದೊಂದಿಗಿನ 22 ಗಡಿ ಪ್ರದೇಶಗಳನ್ನು ಮುಚ್ಚಲು ನೇಪಾಳ ಸರ್ಕಾರವು ನಿರ್ಧರಿಸಿದೆ.

‘ನೇಪಾಳ ಮತ್ತು ಭಾರತದ ನಡುವಿನ ಒಟ್ಟು 35 ಗಡಿ ಪ್ರದೇಶಗಳಲ್ಲಿ 22 ಅನ್ನು ಮುಚ್ಚುವಂತೆ ನೇಪಾಳದ ಕೋವಿಡ್‌ ವಿಪತ್ತು ನಿರ್ವಹಣಾ ಸಮನ್ವಯ ಸಮಿತಿಯು (ಸಿಸಿಎಂಸಿ) ಸಲಹೆ ನೀಡಿತ್ತು. ಇದರ ಬೆನ್ನಲ್ಲೇ ಈ ಕ್ರಮವನ್ನು ಕೈಗೊಳ್ಳಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರು.

‘ಸದ್ಯ ಭಾರತ ಮತ್ತು ನೇಪಾಳದ ನಡುವಿನ ಕೇವಲ 13 ಗಡಿಗಳು ತೆರೆದಿರಲಿವೆ’ ಎಂದು ಅವರು ಹೇಳಿದರು.

ನೇಪಾಳದಲ್ಲಿ ಒಟ್ಟು 3,23,187 ಪ್ರಕರಣಗಳು ವರದಿಯಾಗಿದ್ದು, 3,279 ಮಂದಿ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT