ನೇಪಾಳ ವಿಮಾನ ದುರಂತ: ಮೃತರ ಸಂಖ್ಯೆ 71ಕ್ಕೆ ಏರಿಕೆ

ಕಠ್ಮಂಡು: ವಿಮಾನ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 71ಕ್ಕೆ ಏರಿದ್ದು, ಪತ್ತೆಯಾದ ಮೃತದೇಹಗಳನ್ನು ಸಂಬಂಧಿಸಿದ ಕುಟುಂಬಗಳಿಗೆ ಹಸ್ತಾಂತರಿಸುವ ಪ್ರಕ್ರಿಯೆಗೆ ಮಂಗಳವಾರ ಚಾಲನೆ ನೀಡಲಾಗಿದೆ.
‘ಸೋಮವಾರ ರಾತ್ರಿ ಪೊಖರಾ ಕಣಿವೆಯ ಸೇಟಿ ನದಿಯ ಕಮರಿಯಲ್ಲಿ ಅಪಘಾತ ಸಂಭವಿಸಿದ ಸ್ಥಳದಲ್ಲಿ 71 ಮೃತದೇಹಗಳನ್ನು ಪತ್ತೆ ಹಚ್ಚಲಾಗಿದೆ. ಇನ್ನೂ ಒಬ್ಬ ವ್ಯಕ್ತಿ ಪತ್ತೆ ಆಗಿಲ್ಲ. ಶೋಧಕಾರ್ಯ ಮುಂದುವರಿದಿದೆ’ ಎಂದು ಮೂಲಗಳು ತಿಳಿಸಿವೆ.
‘ಮರಣೋತ್ತರ ಪರೀಕ್ಷೆಯ ಬಳಿಕ ಸಂಬಂಧಿಸಿದವರ ಕುಟುಂಬಗಳಿಗೆ ಮೃತದೇಹಗಳನ್ನು ಹಸ್ತಾಂತರಿಸಲಾಗಿದೆ’ ಎಂದು ಯೇತಿ ಏರ್‌ಲೈನ್ಸ್‌ನ ವಕ್ತಾರ ಸುದರ್ಶನ್ ಬರ್ತೌಲಾ ತಿಳಿಸಿದ್ದಾರೆ.
‘ವಿದೇಶಿ ಪ್ರಜೆಗಳ ಮೃತದೇಹಗಳನ್ನು ಅವರ ಕುಟುಂಬದ ಸದಸ್ಯರಿಗೆ ಅಥವಾ ಸಂಬಂಧಪಟ್ಟ ರಾಯಭಾರ ಕಚೇರಿಗಳಿಗೆ ಹಸ್ತಾಂತರಿಸಲಾಗುವುದು. ಅಪಘಾತದಲ್ಲಿ ಸಾವಿಗೀಡಾದ ಉತ್ತರ ಪ್ರದೇಶದ ಗಾಜಿಪುರದ ನಾಲ್ವರ ಮೃತದೇಹಗಳನ್ನು ಪಡೆಯಲು ಅವರ ಕುಟುಂಬ ಸದಸ್ಯರು ಕಠ್ಮಂಡು ತಲುಪಿದ್ದಾರೆ’ ಎಂದೂ ಹೇಳಿವೆ
ಫ್ರಾನ್ಸ್‌ನಿಂದ ತಜ್ಞರು: ‘ಅಪಘಾತ ಕುರಿತು ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೆ ಸಹಾಯ ಮಾಡಲು ಫ್ರಾನ್ಸ್‌ನ ತಜ್ಞರು ಮಂಗಳವಾರ ನೇಪಾಳಕ್ಕೆ ತೆರಳಿದ್ದಾರೆ’ ಎಂದು ರೇಡಿಯೊ ಫ್ರಾನ್ಸ್ ಇಂಟರ್‌ನ್ಯಾಷನಲ್ ವರದಿ ಮಾಡಿದೆ.
ಸ್ಕೂಟರ್ಗೆ ಜೋತುಬಿದ್ದ ಚಾಲಕನ ಎಳೆದೊಯ್ದ ಸವಾರ: ಮಾಗಡಿ ರಸ್ತೆಯಲ್ಲಿ ಘಟನೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.