ಬುಧವಾರ, ಅಕ್ಟೋಬರ್ 21, 2020
25 °C
8 ತಿಂಗಳ ಹಿಂದೆ ನೇಪಾಳವನ್ನು ಕೋವಿಡ್‌ ಮುಕ್ತ ಎಂದು ಘೋಷಿಸಲಾಗಿತ್ತು

ನೇಪಾಳ ಪ್ರವಾಸೋದ್ಯಮ ಸಚಿವ ಯೋಗೇಶ್ ಭಟ್ಟರೈ ಅವರಿಗೆ ಕೋವಿಡ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕಠ್ಮಂಡು: ನೇಪಾಳದ ಪ್ರವಾಸೋದ್ಯಮ ಸಚಿವ ಯೋಗೇಶ್ ಭಟ್ಟರೈ ಅವರಿಗೆ ಕೋವಿಡ್‌–19 ಇರುವುದು ದೃಢಪಟ್ಟಿದೆ.

ಈ ಬಗ್ಗೆ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ತಮ್ಮ ಸಂಪರ್ಕಕ್ಕೆ ಬಂದವರು ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕೆಂದು ಕೋರಿದ್ದಾರೆ.

ನೇಪಾಳ ಕೊರೊನಾ ಸೋಂಕಿ‌ನಿಂದ ಮುಕ್ತವಾಗಿದೆ ಎಂದು ಯೋಗೇಶ್ ಫೆಬ್ರುವರಿಯಲ್ಲಿ ಘೋಷಿಸಿದ್ದರು.

‘ನೇಪಾಳದ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಅವರ ಸಂಪುಟದಲ್ಲಿ ಕೋವಿಡ್ ಪೀಡಿತ ಸಚಿವರಲ್ಲಿ ಯೋಗೇಶ್ ಮೊದಲಿಗರಾಗಿದ್ದಾರೆ. ಒಲಿ ಅವರ ಆಪ್ತ ವೈದ್ಯ, ಛಾಯಾಗ್ರಾಹಕ ಮತ್ತು ಮಾಧ್ಯಮ ತಜ್ಞ ಸೇರಿದಂತೆ 8 ಮಂದಿಗೆ ಕೊರೊನಾ ಸೋಂಕು ತಗುಲಿದೆ’ ಎಂದು ‘ದ ಕಠ್ಮಂಡು ಪೋಸ್ಟ್’ ವರದಿ ಮಾಡಿದೆ.

‘ಕಳೆದ ಸೋಮವಾರ ನಾನು ಕೊರೊನಾ ಪರೀಕ್ಷೆ ಮಾಡಿಸಿಕೊಂಡಾಗ ವರದಿ ನೆಗೆಟಿವ್ ಎಂದು ಬಂದಿತ್ತು. ಆ ಸಮಯದಲ್ಲಿ ನಾನು ಕಠ್ಮಂಡುವಿನಿಂದ ಹೊರಗಡೆ ಕೆಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೆ. ಆಗ ನನಗೆ ಜ್ವರ ಬಂದ ಹಾಗಿತ್ತು. ಅಲ್ಲಿಂದ ಬಂದ ನಂತರ ಪರೀಕ್ಷೆಗೊಳಪಟ್ಟಿದೆ. ಶನಿವಾರ ನನಗೆ ಕೋವಿಡ್ ಇರುವುದು ದೃಢಪಟ್ಟಿತು’ ಎಂದು ಅವರು ಮಾಹಿತಿ ನೀಡಿದ್ದಾರೆ.

ಗುರುವಾರ ಭಾರತದ ರಾಯಭಾರಿ ವಿನಯ್ ಮೋಹನ್ ಕ್ವಾತ್ರಾ ಅವರನ್ನು ಭೇಟಿ ಮಾಡಿದ್ದ ಯೋಗೇಶ್ ಅವರು, ಉಭಯ ದೇಶಗಳಲ್ಲಿ ಪ್ರವಾಸೋದ್ಯಮ ಅಭಿವೃದ್ದಿಗೆ ಸಂಬಂಧಪಟ್ಟಂತೆ ಚರ್ಚೆ ಮಾಡಿದ್ದರು. ನೇಪಾಳದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1 ಲಕ್ಷಕ್ಕೆ ಏರಿದ್ದು, ಇದುವರೆಗೆ 600 ಮಂದಿ ಸಾವಿಗೀಡಾಗಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು