ಸೋಮವಾರ, ಡಿಸೆಂಬರ್ 6, 2021
23 °C

ಅಧಿಕಾರಕ್ಕೇರಿದ 12 ಗಂಟೆಯಲ್ಲೇ ರಾಜೀನಾಮೆ ನೀಡಿದ ಸ್ವೀಡನ್‌ನ ಮೊದಲ ಮಹಿಳಾ ಪ್ರಧಾನಿ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ಸ್ಟಾಕ್ಹೋಮ್: ಸ್ವೀಡನ್‌ನ ಮೊದಲ ಮಹಿಳಾ ಪ್ರಧಾನ ಮಂತ್ರಿ, ಸೋಷಿಯಲ್‌ ಡೆಮಾಕ್ರಟಿಕ್‌ ಪಕ್ಷದ ಮ್ಯಾಗ್ಡಲೀನಾ ಆಂಡರ್ಸನ್ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ ಕೇವಲ 12 ಗಂಟೆಗಳಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಮೈತ್ರಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಗ್ರೀನ್‌ ಪಾರ್ಟಿಯು ಬುಧವಾರ ಹಿಂಪಡೆಯಿತು. ಹೀಗಾಗಿ ಮ್ಯಾಗ್ಡಲೀನಾ ಸ್ಥಾನ ತೊರೆಯಬೇಕಾಯಿತು.

‘ಸ್ವಂತ ಸರ್ಕಾರವನ್ನು ರಚಿಸಿ, ಶೀಘ್ರದಲ್ಲೇ ಪ್ರಧಾನಿಯಾಗುವುದಾಗಿ ಸಂಸತ್ತಿನ ಸ್ಪೀಕರ್‌ಗೆ ತಿಳಿಸಿದ್ದೇನೆ,‘ ಎಂದು ಮ್ಯಾಗ್ಡಲೀನಾ ಹೇಳಿದರು.

‘ಇತರ ಪಕ್ಷಗಳಿಂದ ಬೆಂಬಲ ವ್ಯಕ್ತವಾಗಿರುವುದರಿಂದ ತಾವು ಪ್ರಧಾನಿಯಾಗುವ ಸಾಧ್ಯತೆ ಬಲವಾಗಿದೆ,’ ಎಂದೂ ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು