ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಲಾಕ್ ಹಾಕ್ ಹೆಲಿಕಾಪ್ಟರ್‌ಗಳ ಘರ್ಷಣೆ: ಅಮೆರಿಕ ಸೇನೆಯ 9 ಯೋಧರು ಸಾವು

Last Updated 30 ಮಾರ್ಚ್ 2023, 16:07 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅಮೆರಿಕ ಸೇನೆಯ ಎರಡು ಹೆಲಿಕಾಪ್ಟರ್‌ಗಳು ಪರಸ್ಪರ ಘರ್ಷಣೆಯಾಗಿ 9 ಯೋಧರು ಮೃತಪಟ್ಟಿರುವ ಘಟನೆ ನಡೆದಿದೆ.

ಕೆಂಟುಕಿ ರಾಜ್ಯದ ಪೋರ್ಟ್ ಕ್ಯಾಂಪ್‌ಬೆಲ್ ಎಂಬಲ್ಲಿ ಗುರುವಾರ ಈ ದುರ್ಘಟನೆ ನಡೆದಿದಿದ್ದು ಹೆಲಿಕಾಪ್ಟರ್‌ನಲ್ಲಿದ್ದ ಎಲ್ಲ 9 ಯೋಧರು ಮೃತರಾಗಿದ್ದಾರೆ ಎಂದು ಬ್ರಿಗೇಡಿಯರ್ ಜನರಲ್ ಜಾನ್ ಲುಬಾಸ್ ತಿಳಿಸಿದ್ದಾರೆ.

ವೈ‌ದ್ಯಕೀಯ ಕಾರ್ಯಾಚರಣೆಗೆಂದು ತಯಾರಿಸಲ್ಪಟ್ಟಿದ್ದ ಬ್ಲಾಕ್ ಹಾಕ್ ಹೆಲಿಕಾಪ್ಟರ್‌ಗಳನ್ನು ಯೋಧರು ತರಬೇತಿಗಾಗಿ ತೆಗೆದುಕೊಂಡು ಹೋಗಿದ್ದರು.

ತರಬೇತಿ ವೇಳೆ ಎರಡೂ ಹೆಲಿಕಾಪ್ಟರ್‌ಗಳು, ಪೈಲಟ್‌ಗಳ ತಪ್ಪಿನಿಂದ ಪರಸ್ಪರ ಘರ್ಷಣೆಯಿಂದ ಆಕಾಶದಲ್ಲೇ ಸ್ಪೋಟವಾಗಿ ನೆಲಕ್ಕಪ್ಪಳಿಸಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಘಟನೆ ಬಗ್ಗೆ ಕೆಂಟುಕಿ ಗವರ್ನರ್ ಆ್ಯಂಡಿ ಬೇಷರ್ ಆಘಾತ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT