ಮಂಗಳವಾರ, ಡಿಸೆಂಬರ್ 6, 2022
20 °C

ಗಡಿಪಾರು ಅದೇಶದ ವಿರುದ್ಧ ಮೇಲ್ಮನವಿ: ಅನುಮತಿ ಕೋರಿ ನೀರವ್‌ ಮೋದಿ ಅರ್ಜಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಂಡನ್: ಭಾರತದ ವಜ್ರದ ಉದ್ಯಮಿ 51 ವರ್ಷದ ನೀರವ್‌ ಮೋದಿ, ಸುಪ್ರೀಂ ಕೋರ್ಟ್‌ ತಮ್ಮ ವಿರುದ್ಧ ನೀಡಿರುವ ಗಡಿಪಾರು ಆದೇಶದ ವಿರುದ್ಧ ಮೇಲ್ಮನವಿಯನ್ನು ಸಲ್ಲಿಸಲು ಅನುಮತಿ ಕೋರಿ ಇಲ್ಲಿನ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಮಾನಸಿಕ ಆರೋಗ್ಯ ಸ್ಥಿತಿ ಆಧಾರದಲ್ಲಿ ನೀರವ್‌ ಮೋದಿ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್‌ನ ದ್ವಿಸದಸ್ಯ ಪೀಠ ಈ ತಿಂಗಳ ಆರಂಭದಲ್ಲಿ ತಿರಸ್ಕರಿಸಿತ್ತು. ಮಾನಸಿಕ ಆರೋಗ್ಯ ಸ್ಥಿತಿ ಕಳವಳ ಪಡುವ ಸ್ಥಿತಿಯಲ್ಲಿ ಇಲ್ಲ. ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ (ಪಿಎನ್‌ಬಿ) 16 ಸಾವಿರ ಕೋಟಿ ಸಾಲ ಹಗರಣದ ವಿಚಾರಣೆ ಎದುರಿಸಲು ಗಡೀಪಾರು ಜಾರಿಗೊಳಿಸಬಹುದು ಎಂದು ಹೇಳಿತ್ತು.

ಸದ್ಯ, ಕಾರಾಗೃಹದಲ್ಲಿರುವ ನೀರವ್ ಮೇಲ್ಮನವಿ ಸಲ್ಲಿಸಲು ಎರಡು ವಾರ ಸಮಯ ಹೊಂದಿದ್ದಾರೆ. ಕಾನೂನು ಹೋರಾಟದ ಆಯ್ಕೆ ಮುಕ್ತವಾಗಿದ್ದು, ಗಡಿಪಾರು ಕ್ರಮ ಎಂದು ಜಾರಿಯಾಗಲಿದೆ ಎಂದು ಹೇಳಲಾಗದು ಎಂದು ಗೃಹ ಇಲಾಖೆಯ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು