ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾದ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ?

Last Updated 25 ಏಪ್ರಿಲ್ 2022, 14:00 IST
ಅಕ್ಷರ ಗಾತ್ರ

ಕೊಲಂಬೊ: ಶ್ರೀಲಂಕಾ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ವಿರೋಧ ಪಕ್ಷಗಳು ಸಿದ್ಧತೆ ನಡೆಸಿವೆ. ಅವಿಶ್ವಾಸ ನಿರ್ಣಯ ಗೆಲ್ಲಲು ಬೇಕಿರುವ 113 ಸದಸ್ಯರ ಬಲವನ್ನು ವಿರೋಧಪಕ್ಷಗಳು ಹೊಂದಿವೆ ಎಂದು ಭಿನ್ನಮತೀಯ ಸಂಸದರೊಬ್ಬರು ತಿಳಿಸಿದ್ದಾರೆ.

ಸರ್ಕಾರದ ವಿರುದ್ಧ ಬೇಸರಗೊಂಡಿರುವ ಸಂಸದರಿಗೆ ವಿರೋಧ ಪಕ್ಷಗಳಾದ ಸಮಗಿ ಜನ ಬಾಲವೆಗಯ (ಎಸ್‌ಜೆಪಿ), ಮಾರ್ಕ‌್ಸಿಸ್ಟ್ ಜನತಾ ವಿಕ್‌ಮುತಿ ಪೆರಮುನ (ಜೆವಿಪಿ), ತಮಿಳ್‌ ರಾಷ್ಟ್ರೀಯ ಮೈತ್ರಿ (ಟಿಎನ್ಎ) ಬೆಂಬಲವಿದೆ ಎಂದು ಸಂಸದ ಉದಯ ಗಮ್ಮನ್‌ಪಿಲಾ ಹೇಳಿದ್ದಾರೆ.

ಹಣಕಾಸು ಸಚಿವ, ಅಧ್ಯಕ್ಷರ ತಮ್ಮ ಬಸಿಲ್ ರಾಜಪಕ್ಸ ವಿರುದ್ಧ ಟೀಕಾಪ್ರಹಾರ ನಡೆಸಿದ್ದಕ್ಕಾಗಿಉದಯ ಗಮ್ಮನ್‌ಪಿಲಾ ಮತ್ತು ವಿಮಲ್‌ ವೀರವಾನ್ಸಾ ಅವರನ್ನು ಸಂಪುಟದಿಂದ ವಜಾ ಮಾಡಲಾಗಿತ್ತು. ಗಮ್ಮಿನ್‌ಪಿಲಾ ಅವರು ಇಂಧನ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಈ ಇಬ್ಬರು ಪ್ರಧಾನಿ ಮಹಿಂದಾ ರಾಜಪಕ್ಸ ಅವರ ರಾಜೀನಾಮೆಗೂ ಆಗ್ರಹಪಡಿಸುತ್ತಿದ್ದಾರೆ.

ಸರ್ಕಾರ ದೇಶದಲ್ಲಿನ ಆರ್ಥಿಕ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ವಿಫಲವಾಗಿದೆ ಎಂಬ ಹಿನ್ನೆಲೆಯಲ್ಲಿ ಅಧ್ಯಕ್ಷ ಗೋಟಬಯ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. 225 ಸದಸ್ಯ ಬಲದ ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯ ಗೆಲ್ಲಲು 113 ಸದಸ್ಯರ ಬೆಂಬಲ ಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT