ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾದ 'ಚಂದ್ರನತ್ತ ಮಾನವ' ಯೋಜನೆ 2026ಕ್ಕೆ: ವರದಿ

Last Updated 16 ನವೆಂಬರ್ 2021, 6:55 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾದ ಮಹತ್ವಾಕಾಂಕ್ಷೆಯ ಚಂದ್ರನತ್ತ ಮಾನವ ಯೋಜನೆ 2025ರ ಬದಲಿಗೆ 2026ರಲ್ಲಷ್ಟೇ ಕಾರ್ಯರೂಪಕ್ಕೆ ಬರಲಿದೆ ಎಂದು ಸರ್ಕಾರಿ ಲೆಕ್ಕ‍ಪರಿಶೋಧನೆಯ ಪ್ರಕಟಣೆಯೊಂದು ಸೋಮವಾರ ಹೇಳಿದೆ.

‘ತಾಂತ್ರಿಕ ಸಮಸ್ಯೆಗಳು, ಕೋವಿಡ್‌ ಪಿಡುಗು ಮತ್ತು ಹವಾಮಾನದ ತೊಂದರೆಗಳಿಂದಚಂದ್ರನತ್ತ ಅಮೆರಿಕನ್ನರನ್ನು ಕಳುಹಿಸುವ ಆರ್ಟಿಮಿಸ್ ಯೋಜನೆಯುವಿಳಂಬವಾಗಿದೆ’ ಎಂದು ನಾಸಾದ ಲೆಕ್ಕ ಪರಿಶೋಧನಾ ವಿಭಾಗದ ಇನ್‌ಸ್ಪೆಕ್ಟರ್‌ ಜನರಲ್‌ ಕಚೇರಿ ವರದಿಯೊಂದರಲ್ಲಿ ತಿಳಿಸಿದೆ.

‘ಅಗತ್ಯ ನಿಧಿಯ ಕೊರತೆ, ಸೂಕ್ತ ಸಮಯದ ನಿರ್ವಹಣೆಯ ಸಮಸ್ಯೆ ಮತ್ತು ಪ್ರಮುಖ ತಾಂತ್ರಿಕ ತೊಂದರೆಗಳಿಂದ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸುವ ನಾಸಾದ ಯೋಜನೆ 2024ರ ನಂತರ ಕೈಗೂಡಲಿದೆ’ ಎಂದು ವರದಿ ವಿವರಿಸಿದೆ.

‘ಯೋಜನೆಗೆ ಅಗತ್ಯವಾದ ಪರಿಕರಗಳು 2025ಕ್ಕಿಂತ ಮೊದಲು ಸಿದ್ಧವಾಗುವುದಿಲ್ಲ. ಎರಡನೆಯದಾಗಿ ಮಾನವನನ್ನು ಇಳಿಸುವ ವ್ಯವಸ್ಥೆಯ ಅಭಿವೃದ್ಧಿಯೂ ತಡವಾಗಲಿದೆ’ ಎಂದೂ ಅದು ಮಾಹಿತಿ ನೀಡಿದೆ. ಈ ಮೊದಲು 2025ರಲ್ಲಿ ಯೋಜನೆ ಕಾರ್ಯಗತಗೊಳ್ಳಲಿದೆ ಎಂದು ತಿಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT