ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎ ಪ್ರಾಮಿಸ್ಡ್ ಲ್ಯಾಂಡ್‌‘: ಬಿಡುಗಡೆಯಾದ ವಾರದಲ್ಲಿಯೇ 17 ಲಕ್ಷ ಪ್ರತಿ ಮಾರಾಟ

Last Updated 25 ನವೆಂಬರ್ 2020, 7:00 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಉತ್ತರ ಅಮೆರಿಕದಲ್ಲಿ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರ ‘ಎ ಪ್ರಾಮಿಸ್ಡ್ ಲ್ಯಾಂಡ್‌‘ ಪುಸ್ತಕವು ಬಿಡುಗಡೆಯಾದ ವಾರದಲ್ಲಿಯೇ 17 ಲಕ್ಷ ಪ್ರತಿಗಳು ಮಾರಾಟವಾಗಿವೆ. ಇದು ಅತಿ ಹೆಚ್ಚು ಮಾರಾಟವಾದ ‘ನಾನ್‌–ಫಿಕ್ಷನ್‌’ ಪುಸ್ತಕ ಎಂಬ ಹಿರಿಮೆಗೂ ಪಾತ್ರವಾಗಿದೆ.

‘ಎ ಪ್ರಾಮಿಸ್ಡ್ ಲ್ಯಾಂಡ್‌‘ ಪುಸ್ತಕದ ಆರಂಭಿಕ ಮುದ್ರಣವನ್ನು 34 ಲಕ್ಷ ಪ್ರತಿಗಳಿಂದ 43 ಲಕ್ಷ ಪ್ರತಿಗಳಿಗೆ ಹೆಚ್ಚಿಸಲಾಗಿದೆ. ಆಡಿಯೊ ಮತ್ತು ಡಿಜಿಟಲ್‌ ಪುಸ್ತಕ ಕೂಡ ಮಾರಾಟವಾಗುತ್ತಿದೆ.

ನವೆಂಬರ್‌ 17ರಂದು ಬಿಡುಗಡೆಯಾದ ‘ಎ ಪ್ರಾಮಿಸ್ಡ್ ಲ್ಯಾಂಡ್‌' ಪುಸ್ತಕ ಮೊದಲ ದಿನವೇ 8,90,000 ಪ್ರತಿಗಳು ಮಾರಾಟವಾಗಿದ್ದವು.

ಒಬಾಮ ಅವರ ಪತ್ನಿ ಮಿಶೆಲ್‌ ಒಬಾಮ ಅವರ ಆತ್ಮಚರಿತ್ರೆ ‘ಬಿಕಮಿಂಗ್‌' 2018ರಲ್ಲಿ ಬಿಡುಗಡೆಯಾಗಿತ್ತು. ವಿಶ್ವದಾದ್ಯಂತ ಅದರ 1 ಕೋಟಿ ಪ್ರತಿಗಳು ಮಾರಾಟವಾಗಿವೆ. ಸದ್ಯ ಈ ಕೃತಿಯು ಅಮೆಜಾನ್.ಕಾಮ್‌ನಲ್ಲಿ ಟಾಪ್‌ 20ರಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT