ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಕ್ಯಾಪಿಟಲ್ ಕಟ್ಟಡಕ್ಕೆ ನುಗ್ಗಿದ ಕಾರು; ಪೊಲೀಸ್ ಅಧಿಕಾರಿ ಸಾವು

Last Updated 3 ಏಪ್ರಿಲ್ 2021, 2:12 IST
ಅಕ್ಷರ ಗಾತ್ರ

ವಾಷಿಂಗ್ಟನ್: ವಾಷಿಂಗ್ಟನ್‌ನಲ್ಲಿರುವ ಕ್ಯಾಪಿಟಲ್ ಕಟ್ಟಡಕ್ಕೆ ವ್ಯಕ್ತಿಯೊಬ್ಬ ಕಾರನ್ನು ವೇಗವಾಗಿ ನುಗ್ಗಿಸಿದ ಪರಿಣಾಮ ಸಂಭವಿಸಿದ ಅವಘಡದಲ್ಲಿ ಅಮೆರಿಕ ಪೊಲೀಸ್‌ನ ಓರ್ವ ಅಧಿಕಾರಿ ಮೃತಪಟ್ಟಿದ್ದು, ಮಗದೋರ್ವ ಹಿರಿಯ ಅಧಿಕಾರಿ ಗಾಯಗೊಂಡಿದ್ದಾರೆ.

ಬಳಿಕ ವಾಹನ ಚಾಲಕನನ್ನು ಗುಂಡಿಕ್ಕಿ ಕೊಲ್ಲಲಾಯಿತು ಎಂದು ಅಮೆರಿಕ ಕ್ಯಾಪಿಟಲ್ ಪೊಲೀಸ್ (ಯುಎಸ್‌ಸಿಪಿ) ಮಾಹಿತಿ ನೀಡಿದೆ.

'ಗುಡ್ ಫ್ರೈಡೇ' ದಿನದಂದೇ ಈ ಘಟನೆ ನಡೆದಿದೆ.ಶುಕ್ರವಾರ ಮಧ್ಯಾಹ್ನ ಸ್ಥಳೀಯ ಸಮಯ ಸುಮಾರು 1 ಗಂಟೆಗೆ ಹೊತ್ತಿಗೆ ವೇಗವಾಗಿ ಬಂದ ನೀಲಿ ಸೆಡಾನ್ ಕಾರು ಬ್ಯಾರಿಕೇಡ್ ಹೊಡೆದುರುಳಿಸಿ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಡಿಕ್ಕಿ ಹೊಡೆದಿತ್ತು.

ಮೃತ ಪೊಲೀಸ್ ಅಧಿಕಾರಿ ಬಿಲ್ಲಿ ಇವಾನ್ಸ್ ಎಂದು ಗುರುತಿಸಲಾಗಿದ್ದು, 18 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು ಎಂಬುದು ತಿಳಿದು ಬಂದಿದೆ.


''

ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಇವಾನ್ಸ್ ಸಂತಾಪ ಸೂಚಿಸಿದ್ದು, 'ನಮ್ಮ ಪ್ರಜಾಪ್ರಭುತ್ವದ ಹುತಾತ್ಮ' ಎಂದು ಬಣ್ಣಿಸಿದ್ದಾರೆ.

ಪೊಲೀಸ್ ಅಧಿಕಾರಿಗೆ ಗೌರವ ಸೂಚಕವಾಗಿ ಅಮೆರಿಕ ಕ್ಯಾಪಿಟಲ್ ಹಿಲ್ ಕಟ್ಟಡದಲ್ಲಿ ರಾಷ್ಟ್ರಧ್ವಜವನ್ನು ತಗ್ಗಿಸಲಾಯಿತು. ಅಲ್ಲದೆ ಪ್ರದೇಶದಲ್ಲಿ ಬಿಗು ಭದ್ರತೆ ಏರ್ಪಡಿಸಲಾಗಿದೆ.

ಅಮೆರಿಕ ರಾಷ್ಟ್ರಧ್ವಜವನ್ನು ತಗ್ಗಿಸಿ ಮೃತ ಪೊಲೀಸ್ ಅಧಿಕಾರಿಗೆ ಗೌರವ ಸೂಚಿಸಲಾಯಿತು.
ಅಮೆರಿಕ ರಾಷ್ಟ್ರಧ್ವಜವನ್ನು ತಗ್ಗಿಸಿ ಮೃತ ಪೊಲೀಸ್ ಅಧಿಕಾರಿಗೆ ಗೌರವ ಸೂಚಿಸಲಾಯಿತು.

ಜನವರಿ 6ರಂದು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಅಮೆರಿಕ ಕ್ಯಾಪಿಟಲ್ ಹಿಲ್ ಕಟ್ಟಡಕ್ಕೆ ಮುತ್ತಿಗೆ ಹಾಕಿ ನಡೆಸಿದ ದಂಗೆಯಲ್ಲಿ ಬ್ರಿಯಾನ್ ಸಿಕ್ನಿಕ್ ಎಂಬ ಪೊಲೀಸ್ ಅಧಿಕಾರಿ ಮೃತಪಟ್ಟಿದ್ದರು. ಒಂದು ವಾರದ ಬಳಿಕ ಹೋವರ್ಡ್ ಲೈಬೆನ್‌ಗುಡ್ ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದರು.

ಕಾರು ಚಾಲನೆ ಮಾಡಿದ ವ್ಯಕ್ತಿಯನ್ನು 25 ವರ್ಷದ ನೋವಾ ಗ್ರೀನ್ ಎಂದು ಗುರುತಿಸಲಾಗಿದೆ. ಚಾಲಕ ಕೈಯಲ್ಲಿ ಚಾಕುವನ್ನು ಹಿಡಿದಿದ್ದ ಎಂಬುದು ವಿಡಿಯೊದಲ್ಲಿ ದಾಖಲಾಗಿದೆ ಎಂದು ಕ್ಯಾಪಿಟಲ್ ಪೊಲೀಸ್ ಮುಖ್ಯಸ್ಥ ಯೋಗಾನಂದ ಪಿಟ್‌ಮ್ಯಾನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಘಟನೆಯ ಬಗೆ ತನಿಖೆ ನಡೆಸಲಾಗುತ್ತಿದೆ. ಚಾಲಕ ಮಾನಸಿಕ ಆರೋಗ್ಯ ಸಮಸ್ಯೆಗಳು ಇತ್ತೇ ಎಂಬುದನ್ನು ಪರಿಶೀಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT