ಮಂಗಳವಾರ, ಜನವರಿ 25, 2022
28 °C

ಸಿಂಗಪುರ: ಇನ್ನೆರಡು ತಿಂಗಳಲ್ಲಿ ಪ್ರಬಲ ಸೋಂಕಾಗಲಿದೆ ಓಮೈಕ್ರಾನ್‌, ತಜ್ಞರು

ಪಿಟಿಐ Updated:

ಅಕ್ಷರ ಗಾತ್ರ : | |

ಸಿಂಗಪುರ: ಮುಂದಿನ ಎರಡು ತಿಂಗಳಲ್ಲಿ ಕೋವಿಡ್‌ ರೂಪಾಂತರ ತಳಿ ಓಮೈಕ್ರಾನ್‌ ಸಿಂಗಪುರದಲ್ಲಿ ಪ್ರಬಲ ಸೋಂಕಾಗಿ ಪರಿಣಮಿಸಲಿದೆ. ಸಂಪೂರ್ಣವಾಗಿ ಡೆಲ್ಟಾ ರೂಪಾಂತರದ ಸ್ಥಾನವನ್ನು ಆಕ್ರಮಿಸಿಕೊಳ್ಳಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಮಂಗಳವಾರ ಒಂದೇ ದಿನ 438 ಮಂದಿಗೆ ಓಮೈಕ್ರಾನ್‌ ಸೋಂಕು ತಗುಲಿದೆ. ವಾರದ ಸೋಂಕಿನ ಪ್ರಮಾಣವೂ ಹೆಚ್ಚುತ್ತಿದೆ.

ನಾವು ಅಂದುಕೊಂಡಿದ್ದು ಸರಿಯಾಗಿದ್ದರೆ ಅತಿಹೆಚ್ಚು ಓಮೈಕ್ರಾನ್‌ ಪ್ರಕರಣಗಳು ವರದಿ ಆಗುತ್ತವೆ. ಮುಂದಿನ ಎರಡು ತಿಂಗಳಲ್ಲಿ ಡೆಲ್ಟಾ ರೂಪಾಂತರ ತಳಿಯ ಜಾಗವನ್ನು ಸಂಪೂರ್ಣವಾಗಿ ಓಮೈಕ್ರಾನ್‌ ಆವರಿಸಿಕೊಳ್ಳಲಿದೆ. ಏಕಕಾಲಕ್ಕೆ ಹೆಚ್ಚು ಮಂದಿಗೆ ಸೋಂಕು ವ್ಯಾಪಿಸಿದರೆ ಆಸ್ಪತ್ರೆಗಳಲ್ಲಿ ಬೆಡ್‌, ಚಿಕಿತ್ಸೆ, ವೈದ್ಯಕೀಯ ಉಪಕರಣ ಇತ್ಯಾದಿ ಕೊರತೆಗಳು ಕಾಣಿಸಿಕೊಳ್ಳುತ್ತವೆ. ಇದು ಗಂಭೀರ ವಿಚಾರವಾಗಿ ಪರಿಣಮಿಸಲಿದೆ ಎಂದು ನ್ಯಾಷನಲ್‌ ಹಾಸ್ಪಿಟಲ್‌ ಯೂನಿವರ್ಸಿಟಿಯ ಹಿರಿಯ ಪ್ರೊಫೆಸರ್‌ ಡೇಲ್‌ ಫಿಶರ್‌ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು