ನ್ಯಾಯಾಂಗ ನಿಂದನೆ ಸುದ್ದಿ ಪ್ರಸಾರ: ಪಾಕ್‌ನಲ್ಲಿ ಸುದ್ದಿ ವಾಹಿನಿ ಪರವಾನಗಿ ರದ್ದು

ಇಸ್ಲಮಾಬಾದ್: ಮುಖ್ಯ ನ್ಯಾಯಮೂರ್ತಿ ಮತ್ತು ಕೆಲ ನ್ಯಾಯಾಧೀಶರ ವಿರುದ್ಧ ‘ನಿಂದನಾತ್ಮಕ‘ ಸುದ್ದಿ ಪ್ರಸಾರ ಮಾಡಿದ ಆರೋಪದ ಮೇಲೆ ಪಾಕಿಸ್ತಾನದ ‘ಬೋಲ್ ನ್ಯೂಸ್‘ ಸುದ್ದಿವಾಹಿನಿಯ ಪರವಾನಗಿಯನ್ನು 30 ದಿನಗಳವರೆಗೆ ಅಮಾನತುಗೊಳಿಸುವ ಜತೆಗೆ, ವಿವಾದಾತ್ಮಕ ಸುದ್ದಿ ಪ್ರಕಟಿಸಿದ ನಿರೂಪಕರಿಗೆ 10 ಲಕ್ಷ ದಂಡವನ್ನು ವಿಧಿಸಲಾಗಿದೆ.
ಬೋಲ್ ನ್ಯೂಸ್ ಸುದ್ದಿ ವಾಹಿನಿ ವಿರುದ್ಧ ಕ್ರಮ ಕೈಗೊಂಡಿರುವ ವಿಷಯವನ್ನು ಪಾಕಿಸ್ತಾನ ವಿದ್ಯನ್ಮಾನ ಮಾಧ್ಯಮ ನಿಯಂತ್ರಣ ಪ್ರಾಧಿಕಾರ (ಪಿಇಎಂಆರ್‌ಎ – ಪೆಮ್ರಾ) ಶುಕ್ರವಾರ ಟ್ವೀಟ್ ಮಾಡಿದೆ.
ಜನವರಿ 13ರಂದು ನಿರೂಪಕ ಸಮಿ ಇಬ್ರಾಹಿಂ, ಲಾಹೋರ್ ಹೈಕೋರ್ಟ್‌ನಲ್ಲಿ ನ್ಯಾಯಾಧೀಶರ ನೇಮಕ ಕುರಿತ ವಿಷಯನ್ನು ಚರ್ಚಿಸುವ ಕಾರ್ಯಕ್ರಮದಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮತ್ತು ಇತರೆ ನ್ಯಾಯಾಧೀಶರ ವಿರುದ್ಧ ನಿಂದನಾತ್ಮಕ ಸುದ್ದಿಯನ್ನು ಪ್ರಸಾರ ಮಾಡಿದ್ದಾರೆ. ಈ ಮೂಲಕ ನಿರೂಪಕರು ‘ಸಂವಿಧಾನದ 68 ನೇ ಪರಿಚ್ಛೇದ, 19ನೇ ವಿಧಿ ಮತ್ತು ‘ಪೆಮ್ರಾ ಕಾನೂನಿನ ಸಂಹಿತೆ 2015‘ ಸೇರಿದಂತೆ ಪೆಮ್ರಾದ ಕಾನೂನುಗಳನ್ನು ಉಲ್ಲಂಘಿಸಿ ಉನ್ನತ ನ್ಯಾಯಾಂಗದ ವಿರುದ್ಧದ ಸುದ್ದಿಗಳನ್ನು ಪ್ರಸಾರ ಮಾಡಿದ್ದಾರೆ‘ ಎಂದು ಪೆಮ್ರಾ ಹೇಳಿಕೆಯಲ್ಲಿ ತಿಳಿಸಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.