ಶುಕ್ರವಾರ, ಏಪ್ರಿಲ್ 16, 2021
31 °C

ರಹಸ್ಯ ಮತಪತ್ರದ ಮೂಲಕ ಪಾಕ್‌ ಸೆನೆಟ್‌ ಚುನಾವಣೆ: ಸುಪ್ರೀಂ ಕೋರ್ಟ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಇಸ್ಲಾಮಾಬಾದ್‌: ರಹಸ್ಯ ಮತಪತ್ರದ ಮೂಲಕವೇ ಸೆನೆಟ್‌ ಚುನಾವಣೆ ನಡೆಸಬೇಕು ಎಂದು ಪಾಕಿಸ್ತಾನ ಸುಪ್ರೀಂ ಕೋರ್ಟ್‌ ಆದೇಶ ನೀಡಿದೆ.

ಬುಧವಾರ ಸೆನೆಟ್‌ಗೆ ಚುನಾವಣೆ ನಡೆಯಲಿದೆ. ಚುನಾವಣೆಯಲ್ಲಿ ಹಣ ಬಳಕೆಯಾಗುವುದನ್ನು ತಡೆಯಲು ಮುಕ್ತ ಮತದಾನಕ್ಕೆ ಅವಕಾಶ ನೀಡಬೇಕು ಎಂದು ಕೋರಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು.

ಈ ಬಗ್ಗೆ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠವು ವಿಚಾರಣೆ ನಡೆಸಿತು. ಬಳಿಕ ನಾಲ್ವರು ನ್ಯಾಯಮೂರ್ತಿಗಳು ರಹಸ್ಯ ಚುನಾವಣೆ ಪರ ತೀರ್ಪು ನೀಡಿದರು. ಒಬ್ಬರು ಮಾತ್ರ ವಿರೋಧವಾಗಿ ತೀರ್ಪು ನೀಡಿದರು.

ಸಂವಿಧಾನದ 226ನೇ ವಿಧಿ ಅನ್ವಯ ಸಂಸತ್‌ನ ಮೇಲ್ಮನೆಗೆ ಚುನಾವಣೆ ನಡೆಯಬೇಕು. ಚುನಾವಣೆ ಸಂದರ್ಭದಲ್ಲಿ ಮತಪತ್ರ ರಹಸ್ಯ ಕಾಪಾಡಬೇಕು ಎಂದು ಉಲ್ಲೇಖಿಸಿರುವುದನ್ನು ಪೀಠವು ಪ್ರಸ್ತಾಪಿಸಿದೆ.

ಚುನಾವಣೆಯಲ್ಲಿ ಭ್ರಷ್ಟ ಪದ್ಧತಿಗಳನ್ನು ನಿಯಂತ್ರಿಸಲು ಚುನಾವಣಾ ಆಯೋಗ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು. ಚುನಾವಣೆಯನ್ನು ಪಾರದರ್ಶಕವಾಗಿ ನಡೆಸುವುದು ಆಯೋಗದ ಜವಾಬ್ದಾರಿ ಎಂದು ಪೀಠ ತಿಳಿಸಿದೆ.

ಅಕ್ರಮಗಳನ್ನು ತಡೆಯಲು ಮುಕ್ತ ಮತದಾನಕ್ಕೆ ಅವಕಾಶ ನೀಡುವ ಬಗ್ಗೆ ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವೆ ವಿವಾದ ಸೃಷ್ಟಿಯಾಗಿತ್ತು.

ಮಾರ್ಚ್‌ 3ರಂದು ನಡೆಯುವ ಚುನಾವಣೆಯಲ್ಲಿ ಆಡಳಿತಾರೂಢ ತೆಹ್ರೀಕ್‌–ಐ–ಇನ್ಸಾಪ್‌ ಮತ್ತು ವಿರೋಧ ಪಕ್ಷಗಳ ನಡುವೆ ಪ್ರಬಲ ಸ್ಫರ್ಧೆ ನಡೆಯುವ ಸಾಧ್ಯತೆ ಇದೆ.

ಆರು ವರ್ಷಗಳ ಅವಧಿ ಮುಗಿದ ಕಾರಣ 104 ಸದಸ್ಯರ ಮೇಲ್ಮನೆಯಲ್ಲಿ 52 ಸೆನೆಟ್‌ ಸದಸ್ಯರು ಮಾರ್ಚ್‌ 11ರಂದು ನಿವೃತ್ತರಾಗಲಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು