ಬುಧವಾರ, ಜನವರಿ 20, 2021
28 °C

ಕತ್ತಲಲ್ಲಿ ಮುಳುಗಿದ ಇಡೀ ಪಾಕಿಸ್ತಾನ

ಪಿಟಿಐ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ಶನಿವಾರ ರಾತ್ರಿ ವಿದ್ಯುತ್‌ ಪೂರೈಕೆಯಲ್ಲಿ ದಿಢೀರ್‌ ಸಮಸ್ಯೆ ಉಂಟಾಗಿದೆ. ಹೀಗಾಗಿ ದೇಶದ ಪ್ರಮುಖ ನಗರಗಳೆಲ್ಲವೂ ಸಮಸ್ಯೆಗೆ ತುತ್ತಾಗಿವೆ.

ಕರಾಚಿ, ರಾವಲ್ಪಿಂಡಿ, ಲಾಹೋರ್‌, ಇಸ್ಲಾಮಾಬಾದ್‌, ಮುಲ್ತಾನ್‌ ಮತ್ತು ಇತರ ಪ್ರಮುಖ ನಗರಗಳ ನಾಗರಿಕರು ವಿದ್ಯುತ್‌ ಪೂರೈಕೆ ಇಲ್ಲದೇ ಸಮಸ್ಯೆ ಅನುಭವಿಸಬೇಕಾಯಿತು.

ಈ ಕುರಿತು ಟ್ವೀಟ್‌ ಮಾಡಿದ್ದ ಇಸ್ಲಾಮಾಬಾದ್‌ನ ಉಪ ಆಯುಕ್ತ ಹಮ್ಜಾ ಶಫ್ಕತ್‌, 'ರಾಷ್ಟ್ರೀಯ ವಿದ್ಯುತ್‌ ಪ್ರಸರಣಾ ಕಂಪನಿಯ (ಎನ್‌ಟಿಡಿಸಿ) ವಿದ್ಯುತ್‌ ಮಾರ್ಗಗಳು ಟ್ರಿಪ್‌ ಆಗಿವೆ. ಹೀಗಾಗಿ ಪೂರೈಕೆಯಲ್ಲಿ ಸಮಸ್ಯೆಯಾಗಿದೆ. ಪರಿಸ್ಥಿತಿ ಸಹಜ ಸ್ಥಿತಿಗೆ ಬರಲು ಸಮಯ ಹಿಡಿಯುತ್ತದೆ,' ಎಂದು ಹೇಳಿದ್ದರು.

ರಾಷ್ಟ್ರೀಯ ವಿದ್ಯುತ್‌ ಪ್ರಸರಣಾ ವ್ಯವಸ್ಥೆಯ ಹಠಾತ್‌ ಸ್ಥಗಿತದ ಹಿಂದಿನ ಕಾರಣಗಳನ್ನು ಪತ್ತೆ ಮಾಡಲು ಎನ್‌ಟಿಡಿಸಿ ತಂಡಗಳು ಕಾರ್ಯನಿರ್ವಹಿಸುತ್ತಿವೆ ಎಂದು ವಿದ್ಯುತ್‌ ಪ್ರಸರಣಾ ವ್ಯವಸ್ಥೆಯ ವಕ್ತಾರರ ಮಾಹಿತಿ ಉಲ್ಲೇಖಿಸಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.

'ಪ್ರಸರಣೆಯಲ್ಲಿನ ಆವರ್ತನ ಸಂಖ್ಯೆಯು 50ರಿಂದ ದಿಢೀರ್‌ ಸೊನ್ನೆಗೆ ಕುಸಿದಿದೆ. ಹೀಗಾಗಿ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಆವರ್ತನ ಕುಸಿತಕ್ಕೆ ಕಾರಣವೇನು ಎಂಬುದನ್ನು ನಾವು ಪತ್ತೆ ಮಾಡುತ್ತಿದ್ದೇವೆ,' ಎಂದು ಇಂಧನ ಸಚಿವ ಒಮರ್‌ ಅಯೂಬ್‌ ಟ್ವೀಟ್‌ ಮಾಡಿ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು