ಶನಿವಾರ, ಮೇ 28, 2022
21 °C

ಶ್ರೀಲಂಕಾ ಪ್ರಜೆಯ ಹತ್ಯೆ ಸಮರ್ಥಿಸಿದ್ದ ಪಾಕ್‌ ಯೂಟ್ಯೂಬರ್‌ಗೆ 1 ವರ್ಷ ಜೈಲು

ಪಿಟಿಐ Updated:

ಅಕ್ಷರ ಗಾತ್ರ : | |

ಲಾಹೋರ್‌: ಶ್ರೀಲಂಕಾ ಪ್ರಜೆಯ ಹತ್ಯೆಯನ್ನು ಸಮರ್ಥಿಸಿ ವಿಡಿಯೊ ಮಾಡಿದ್ದ ಪಾಕಿಸ್ತಾನದ 27 ವರ್ಷದ ಯೂಟ್ಯೂಬರ್‌ಗೆ 1 ವರ್ಷ ಜೈಲು ಹಾಗೂ 10,000 ಪಾಕಿಸ್ತಾನಿ ರೂಪಾಯಿ ದಂಡವನ್ನು ವಿಧಿಸಲಾಗಿದೆ.

ಅಲ್ಲಿನ ಭಯೋತ್ಪಾದನೆ ನಿಗ್ರಹ ಕೋರ್ಟ್‌(ಎಟಿಸಿ ಗುಜ್ರಾನ್‌ವಾಲಾ) ನ್ಯಾಯಮೂರ್ತಿ ನತಾಶಾ ನಯೀಮ್‌ ಅವರು ಯೂಟ್ಯೂಬರ್‌ಗೆ ಶಿಕ್ಷೆ ಘೋಷಿಸಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ 3ರಂದು ಸುಮಾರು 800 ಮಂದಿಯಿದ್ದ ಉದ್ರಿಕ್ತ ಗುಂಪು ಹಾಗೂ ಉಗ್ರ ಇಸ್ಲಾಮಿಕ್‌ ಪಕ್ಷಕ್ಕೆ ಸೇರಿದ ಸದಸ್ಯರು ಸಿಯಾಲ್‌ಕೋಟ್‌ ಜಿಲ್ಲೆಯ ಗಾರ್ಮೆಟ್‌ ಫ್ಯಾಕ್ಟರಿಗೆ‌ ದಾಳಿ ನಡೆಸಿ, ಮುಖ್ಯಸ್ಥ ಪ್ರಿಯಾಂತ ಕುಮಾರ ಎಂಬುವವರ ಮೇಲೆ ಭೀಕರ ಹಲ್ಲೆ ನಡೆಸಿ ಹತ್ಯೆ ಮಾಡಿದ್ದರು. ನಂತರ ಮೃತ ದೇಹಕ್ಕೆ ಬೆಂಕಿ ಹಂಚಿದ್ದರು. 47 ವರ್ಷದ ಕುಮಾರ ಅವರು ದೈವನಿಂದನೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.

ಪೊಲೀಸರ ಪ್ರಕಾರ ಸಿಯಾಲ್‌ಕೋಟ್‌ನ ಮುಹಮ್ಮದ್‌ ಅದ್ನನ್‌ ತನ್ನ ಯೂಟ್ಯೂಬ್‌ ಚಾನೆಲ್‌ನಲ್ಲಿ ಕುಮಾರ ಅವರ ಹತ್ಯೆಗೆ ಸಂಬಂಧಿಸಿ ವಿಡಿಯೊ ಅಪ್‌ಲೋಡ್‌ ಮಾಡಿದ್ದ. ಇದರಲ್ಲಿ ಕುಮಾರ ಅವರ ಹತ್ಯೆ ಮತ್ತು ಶವಕ್ಕೆ ಬೆಂಕಿ ಹಂಚಿದ ಕೃತ್ಯವನ್ನು ಸಮರ್ಥಿಸಿಕೊಂಡಿದ್ದ. ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.

ಕೃತ್ಯಕ್ಕೆ ಸಂಬಂಧಿಸಿ 85 ಪ್ರಮುಖ ಆರೋಪಿಗಳನ್ನು ಬಂಧಿಸಿಲಾಗಿದೆ. ಜನವರಿ 31ರೊಳಗೆ ಆರೋಪಿಗಳನ್ನು ಎಟಿಸಿ ಕೋರ್ಟ್‌ಗೆ ಹಾಜರುಪಡಿಸಬೇಕಿದೆ.

ಲಾಹೋರ್‌ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅಮೀರ್‌ ಭಾಟ್ಟಿ ಅವರು ಪ್ರಕರಣದ ಕುರಿತು ಚಾರ್ಟ್‌ಶೀಟ್‌ ದಾಖಲಿಸಲು ನಿರ್ದೇಶನ ನೀಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು