ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನ: ಸುಪ್ರೀಂ ಮುಖ್ಯ ನ್ಯಾಯಮೂರ್ತಿ ಅಧಿಕಾರ ಮೊಟಕುಗೊಳಿಸುವ ಮಸೂದೆ ಅಂಗೀಕಾರ

Last Updated 30 ಮಾರ್ಚ್ 2023, 14:55 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ವಿರೋಧ ಪಕ್ಷಗಳ ಟೀಕೆಯ ನಡುವೆಯೇ ಸುಪ್ರೀಂ ಕೋರ್ಟ್‌ ಮುಖ್ಯನ್ಯಾಯಮೂರ್ತಿಯ ಅಧಿಕಾರವನ್ನು ಮೊಟಕುಗೊಳಿಸುವ ಮಸೂದೆಯನ್ನು ಪಾಕಿಸ್ತಾನದ ಸಂಸತ್ತು ಅಂಗೀಕರಿಸಿದೆ.

ಪಾಕಿಸ್ತಾನದ ಕಾನೂನು ಸಚಿವ ಅಜಮ್‌ ನಜೀರ್‌ ತರರ್‌ ಅವರು ಮಂಡಿಸಿದ ‘ದಿ ಸುಪ್ರೀಂ ಕೋರ್ಟ್‌ (ಪ್ರ್ಯಾಕ್ಟೀಸ್‌ ಅಂಡ್‌ ಪ್ರೊಸೀಜರ್‌) ಬಿಲ್‌ 2023’ಕ್ಕೆ ಗುರುವಾರ ಸೆನೆಟ್‌ ಒಪ್ಪಿಗೆ ನೀಡಿದೆ. ಇದರ ಪ್ರಕಾರ ಸ್ವಯಂಪ್ರೇರಿತ ಪ್ರಕರಣಗಳು ಹಾಗೂ ಸಾಂವಿಧಾನಿಕ ಪೀಠಗಳಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿಗೆ ಇರುವ ಅಧಿಕಾರ ಮೊಟಕಾಗಲಿದೆ. ಬುಧವಾರ ಅಷ್ಟೇ ಈ ಮಸೂದೆಗೆ ಸಂಸತ್ತಿನ ಕೆಳಮನೆಯಲ್ಲಿ (ನ್ಯಾಷನಲ್‌ ಅಸೆಂಬ್ಲಿ) ಅಂಗೀಕಾರ ನೀಡಲಾಗಿತ್ತು.

ಮಸೂದೆ ಪರವಾಗಿ 60 ಮತಗಳು ಹಾಗೂ ವಿರೋಧವಾಗಿ 19 ಮತಗಳು ದೊರೆತವು. ಈ ಮಸೂದೆಯನ್ನು ಅಧ್ಯಕ್ಷ ಆರಿಫ್‌ ಅಲ್ವಿ ಅವರಿಗೆ ಸಲ್ಲಿಸಲಾಗಿದೆ. ಒಂದು ವೇಳೆ ಆರಿಫ್‌ ಅವರು 10 ದಿನಗಳೊಳಗಾಗಿ ಅನುಮತಿ ನೀಡದಿದ್ದರೆ, ಈ ಮಸೂದೆಗೆ ಅವರು ಅನುಮತಿ ನೀಡಿದ್ದಾರೆ ಎಂದೇ ಭಾವಿಸಲಾಗುತ್ತದೆ.

ಪಾಕಿಸ್ತಾನ ತೆಹ್ರೀಕ್‌–ಎ–ಇನ್ಸಾಫ್‌ ಪಕ್ಷದ (ಪಿಟಿಐ) ಸದಸ್ಯರು ಈ ಮಸೂದೆಗೆ ವಿರೋಧ ವ್ಯಕ್ತಪಡಿಸಿ, ಇದು ಸಂವಿಧಾನದ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT