ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಸ್ಟ್‌ಬ್ಯಾಂಕ್‌: ಇಸ್ರೇಲ್‌ ದಾಳಿ, ಇಬ್ಬರು ಪಾಲೆಸ್ಟೀನಿಯರ ಸಾವು

Last Updated 8 ಅಕ್ಟೋಬರ್ 2022, 12:58 IST
ಅಕ್ಷರ ಗಾತ್ರ

ಜರುಸಲೇಮ್: ವೆಸ್ಟ್‌ ಬ್ಯಾಂಕ್ ಮೇಲೆ ಇಸ್ರೇಲ್‌ ಪಡೆಗಳು ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಪ್ಯಾಲೆಸ್ಟೀನ್‌ ಪ್ರಜೆಗಳನ್ನು ಹತ್ಯೆಯಾಗಿದ್ದಾರೆ.

ವೆಸ್ಟ್‌ ಬ್ಯಾಂಕ್‌ನ ಜೆನಿನ್ ನಿರಾಶ್ರಿತರ ಶಿಬಿರದ ಮೇಲೆ ಈ ದಾಳಿ ನಡೆದಿದೆ. ಈ ಪ್ರದೇಶದಲ್ಲಿ ಆಗಾಗ್ಗೆ ಇಸ್ರೇಲ್‌ ಪಡೆಗಳು ಮತ್ತು ಸ್ಥಳೀಯ ನಿವಾಸಿಗಳು, ಬಂದೂಕುಧಾರಿಗಳ ನಡುವೆ ಸಂಘರ್ಷ ನಡೆಯುತ್ತಿರುತ್ತದೆ.

ಇಸ್ರೇನ್‌ ಸೈನಿಕರು ಶನಿವಾರ ಶಿಬಿರಕ್ಕೆ ಪ್ರವೇಶಿಸಿ ಮನೆಗಳನ್ನು ಸುತ್ತುವರಿದರು. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಮೃತಪಟ್ಟು, 11 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಪ್ಯಾಲೆಸ್ಟೀನ್‌ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT