ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೆಮನ್‌ ವಿಮಾನ ನಿಲ್ದಾಣದಲ್ಲಿ ಸ್ಫೋಟ: 26 ಜನರ ಸಾವು

Last Updated 30 ಡಿಸೆಂಬರ್ 2020, 17:30 IST
ಅಕ್ಷರ ಗಾತ್ರ

ಸನಾ (ಯೆಮನ್‌): ನೂತನವಾಗಿ ರಚನೆಯಾದ ಸರ್ಕಾರದ ಸಂಪುಟದ ಸದಸ್ಯರಿದ್ದ ವಿಮಾನವೊಂದು ಇಳಿದ ಕೆಲವೇ ಕ್ಷಣಗಳ ನಂತರ ಯೆಮನ್‌ನ ಏಡನ್‌ ವಿಮಾನ ನಿಲ್ದಾಣದಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, ಕನಿಷ್ಠ 26 ಜನರು ಮೃತಪಟ್ಟಿದ್ದಾರೆ.

‘ಇರಾನ್‌ ಬೆಂಬಲಿತ ಹುತಿ ಬಂಡುಕೋರರು ಈ ಹೇಡಿ ಕೃತ್ಯ ಎಸಗಿದ್ದಾರೆ’ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ಸಚಿವರೆಲ್ಲರೂ ಸುರಕ್ಷಿತವಾಗಿದ್ದು, 50ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ವೈದ್ಯಕೀಯ ಮತ್ತು ಸರ್ಕಾರಿ ಮೂಲಗಳು ತಿಳಿಸಿವೆ. ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಬಹುದು ಎನ್ನಲಾಗಿದೆ.

‘ಸರ್ಕಾರದ ಎಲ್ಲ ಸದಸ್ಯರೂ ಸುರಕ್ಷಿತವಾಗಿದ್ದಾರೆ’ ಎಂದು ಯೆಮನ್‌ನ ಪ್ರಧಾನಿ ಮೊಯೀನ್‌ ಅಬ್ದುಲ್‌ಮಲಿಕ್‌ ಸಯೀದ್‌ ಹೇಳಿದರು. ಸೌದಿ ಅರೇಬಿಯಾದಲ್ಲಿ ಯೆಮನ್‌ನ ರಾಷ್ಟ್ರಪತಿ ಅಬೆದ್ರಬ್ಬೊ ಮನ್ಸೂರ್‌ ಹಾದಿ ಅವರಿಂದ ಕೆಲ ದಿನಗಳ ಹಿಂದೆ ಪ್ರತಿಜ್ಞಾವಿಧಿ ಸ್ವೀಕರಿಸಿದ್ದ ಸಚಿವರು, ಏಡನ್‌ಗೆ ಆಗಮಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT