ಫೈಝರ್ 3 ಡೋಸ್ ಲಸಿಕೆ: 5 ವರ್ಷದೊಳಗಿನ ಮಕ್ಕಳಿಗೆ ಪರಿಣಾಮಕಾರಿ

ವಾಷಿಂಗ್ಟನ್: ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ 3 ಡೋಸ್‌ನ ಫೈಝರ್ ಲಸಿಕೆಯು ಕೋವಿಡ್‌ನಿಂದ ಅತಿಹೆಚ್ಚು ರಕ್ಷಣೆ ನೀಡಲಿದೆ ಎಂದು ಅಮೆರಿಕ ಮೂಲದ ಲಸಿಕೆ ಉತ್ಪಾದನೆ ಕಂಪನಿ ಹೇಳಿಕೊಂಡಿದೆ.
ಈ ಲಸಿಕೆಗೆ ಅನುಮತಿ ಪಡೆಯಲು, ಕೋವಿಡ್ ವಿರುದ್ಧ ಲಸಿಕೆ ಎಷ್ಟು ಪರಿಣಾಮಕಾರಿಯಾಗಿದೆ ಹಾಗೂ ಸುರಕ್ಷಿತವಾಗಿದೆ ಎಂಬುದರ ದತ್ತಾಂಶವನ್ನು ಈ ವಾರದ ಅಂತ್ಯದಲ್ಲಿ ಅಮೆರಿಕದ ಔಷಧ ನಿಯಂತ್ರಣಕ್ಕೆ ಸಲ್ಲಿಸಲು ಫೈಝರ್ ಕಂಪನಿ ಯೋಜಿಸಿದೆ.
ಅಮೆರಿಕದಲ್ಲಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಹೊರತುಪಡಿಸಿ, ಉಳಿದೆಲ್ಲ ಸಮುದಾಯಗಳು ಲಸಿಕೆಗೆ ಅರ್ಹವಾಗಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.