ಸೋಮವಾರ, ನವೆಂಬರ್ 28, 2022
20 °C
ಭಾರತೀಯ ಸಮುದಾಯದೊಂದಿಗೆ ಮೋದಿ ಸಂವಾದ

ಜಿ–20 ಶೃಂಗಸಭೆ: ಮೊಳಗಿದ ‘ಭಾರತ್‌ ಮಾತಾ ಕಿ ಜೈ’ ಘೋಷಣೆಗಳು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬಾಲಿ, ಇಂಡೊನೇಷ್ಯಾ: ಜಿ–20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಇಲ್ಲಿರುವ ಭಾರತೀಯ ಸಮುದಾಯದೊಂದಿಗೆ ಮಂಗಳವಾರ ಸಂವಾದ ನಡೆಸಿದರು.

ಸಂವಾದ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದ ಸಭಾಗೃಹಕ್ಕೆ ಮೋದಿ ಅವರು ಪ್ರವೇಶಿಸುತ್ತಿದ್ದಂತೆಯೇ, ಭಾರತೀಯರಿಂದ ಭಾರಿ ಕರತಾಡನ, ಹರ್ಷೋದ್ಗಾರ ಕಂಡುಬಂತು.

‘ಭಾರತ್‌ ಮಾತಾ ಕಿ ಜೈ’ ಎಂಬ ಘೋಷಣೆಗಳು ಸಭಾಗೃಹದಲ್ಲಿ ಮಾರ್ದನಿಸಿದವು. ಭಾರತೀಯ ವೇಷಭೂಷಣದಲ್ಲಿದ್ದ ಜನರು, ವಂದಿಸುವ ರೀತಿಯಲ್ಲಿ ಕೈಗಳನ್ನು ಜೋಡಿಸಿ ಮೋದಿ ಅವರಿಗೆ ಸ್ವಾಗತ ಕೋರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು