ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಲ್ಲಿ ಅಬ್ಬರಿಸಿದ ಬಿರುಗಾಳಿ: 80ಕ್ಕೂ ಅಧಿಕ ಜನ ಸಾವು, ಹಲವರು ಕಣ್ಮರೆ

Last Updated 13 ಡಿಸೆಂಬರ್ 2021, 5:18 IST
ಅಕ್ಷರ ಗಾತ್ರ

ಮೇಫೀಲ್ಡ್: ಅಮೆರಿಕದ ಆರು ರಾಜ್ಯಗಳಲ್ಲಿ ಶುಕ್ರವಾರ ಸಂಜೆಯಿಂದ ಬೀಸುತ್ತಿರುವ ಚಂಡಮಾರುತದಿಂದಾಗಿ ಈ ವರೆಗೆ ಕನಿಷ್ಠ 83 ಜನರು ಮೃತಪಟ್ಟಿದ್ದಾರೆ. 10ಕ್ಕೂ ಹೆಚ್ಚು ಜನರು ಕಣ್ಮರೆಯಾಗಿದ್ದು, ಹಲವಾರು ಪಟ್ಟಣಗಳು ಹಾನಿಗೊಳಗಾಗಿವೆ.

ಇದು ಅಮೆರಿಕದ ಇತಿಹಾಸದಲ್ಲಿಯೇ 'ಅತಿದೊಡ್ಡ ಚಂಡಮಾರುತ' ಆಗಿದೆ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ತಿಳಿಸಿದ್ದಾರೆ.

'ಇದೊಂದು ದುರಂತ. ಎಷ್ಟು ಜೀವಗಳು ಸಾವಿಗೀಡಾಗಿವೆ ಮತ್ತು ಹಾನಿಯ ಪೂರ್ಣ ಪ್ರಮಾಣದ ಬಗ್ಗೆ ನಮಗೆ ಇನ್ನೂ ಮಾಹಿತಿ ಇಲ್ಲ' ಎಂದವರು ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ.

ಅಮೆರಿಕದಾದ್ಯಂತ ಬಿರುಗಾಳಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ ನಾಗರಿಕರಿಗೆ ಶೋಧ ಮತ್ತು ರಕ್ಷಣಾ ಅಧಿಕಾರಿಗಳು ಸಹಾಯ ಮಾಡಿದರು. ಅವಶೇಷಗಳಡಿ ಸಿಲುಕಿದ್ದವರನ್ನು ಪತ್ತೆ ಮಾಡಲಾಗಿದ್ದು, ಇನ್ನೂ ಬದುಕುಳಿದಿರುವವರ ಪತ್ತೆಗಾಗಿ ಶೋಧ ಕಾರ್ಯ ಕೈಗೊಳ್ಳಳಾಗಿದೆ.

ಸುಂಟರಗಾಳಿಗೆ ಕೆಂಟುಕಿಯೊಂದರಲ್ಲೇ 70 ಕ್ಕೂ ಹೆಚ್ಚು ಜನರು ಸಾವಿಗೀಡಾಗಿರುವುದಾಗಿ ಹೇಳಲಾಗಿದ್ದು, ಅವರಲ್ಲಿ ಹೆಚ್ಚಿನವರು ಮೇಣದಬತ್ತಿ ಕಾರ್ಖಾನೆಯ ಕಾರ್ಮಿಕರು ಮತ್ತು ಇಲಿನಾಯಿಸ್‌ನ ಅಮೆಜಾನ್ ವೇರ್‌ಹೌಸ್‌ನಲ್ಲಿ ಸಿಲುಕಿದ್ದವರಲ್ಲಿ ಕನಿಷ್ಠ ಆರು ಜನರು ಮೃತಪಟ್ಟಿದ್ದಾರೆ. ಕ್ರಿಸ್‌ಮಸ್ ಅಂಗವಾಗಿ ಅವರು ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ.

'ಕೆಂಟುಕಿಯ ಇತಿಹಾಸದಲ್ಲಿಯೇ ಇದು ಅತ್ಯಂತ ಕೆಟ್ಟ, ವಿನಾಶಕಾರಿ, ಮಾರಣಾಂತಿಕ ಸುಂಟರಗಾಳಿಯಾಗಿದೆ. ಇದರಲ್ಲಿ ನಾವು 100ಕ್ಕೂ ಹೆಚ್ಚು ಜನರನ್ನು ಕಳೆದುಕೊಂಡಿರಬಹುದು' ಎಂದು ರಾಜ್ಯದ ಗವರ್ನರ್ ಆ್ಯಂಡಿ ಬೆಶಿಯರ್ ಆಂತಂಕ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಈ ವಿನಾಶವು ನಾನು ಈವರೆಗೆ ನೋಡಿದ್ದಕ್ಕಿಂತ ಭಿನ್ನವಾಗಿದೆ ಮತ್ತು ಅದನ್ನು ಪದಗಳಲ್ಲಿ ಹೇಳಲು ನನಗೆ ಆಗುತ್ತಿಲ್ಲ' ಎಂದು ತಿಳಿಸಿದರು.

ಸದ್ಯ ರಾಜ್ಯದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT