ಭಾನುವಾರ, ಡಿಸೆಂಬರ್ 4, 2022
21 °C

ಉಕ್ರೇನ್‌ನ 4 ಪ್ರದೇಶಗಳು ರಷ್ಯಾಕ್ಕೆ ಸೇರ್ಪಡೆ: ಪುಟಿನ್‌ ಅಂಕಿತ

ಎಪಿ Updated:

ಅಕ್ಷರ ಗಾತ್ರ : | |

Prajavani

ಕೀವ್‌ : ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಉಕ್ರೇನ್‌ನ ನಾಲ್ಕು ಪ್ರದೇಶಗಳನ್ನು ರಷ್ಯಾಕ್ಕೆ ಸೇರ್ಪಡೆ ಮಾಡಿಕೊಂಡಿರುವುದಕ್ಕೆ ಸಂಬಂಧಿಸಿದ ದಾಖಲೆಗಳಿಗೆ ಸಹಿ ಹಾಕಿದ್ದಾರೆ.

ರಷ್ಯಾ ಸರ್ಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಬುಧವಾರ ಬೆಳಿಗ್ಗೆ ಈ ಕಡತಗಳನ್ನು ಪ್ರಕಟಿಸಲಾಗಿದೆ. 

ಡೊನೆಸ್ಕ್‌, ಲುಹಾನ್‌ಸ್ಕ್‌, ಝಪೋರಿಝಿಯಾ ಮತ್ತು ಕೆರ್ನಾನ್‌ ಪ್ರದೇಶಗಳನ್ನು ರಷ್ಯಾಕ್ಕೆ ಸೇರ್ಪಡೆ ಮಾಡಿಕೊಳ್ಳುವುದಕ್ಕೆ ರಷ್ಯಾ ಸಂಸತ್ತಿನ ಎರಡೂ ಸದನಗಳು ಇತ್ತೀಚೆಗೆ ಅನುಮೋದನೆ ನೀಡಿದ್ದವು. ಇದಕ್ಕೂ ಮುನ್ನ, ಈ ನಾಲ್ಕು ಪ್ರದೇಶಗಳಲ್ಲಿ ಈ ಸಂಬಂಧ ಜನಾಭಿಪ್ರಾಯ ಸಂಗ್ರಹಿಸಲಾಗಿತ್ತು.

ರಷ್ಯಾದ ನಡೆಯನ್ನು ತಳ್ಳಿಹಾಕಿರುವ ಉಕ್ರೇನ್‌ ಅಧ್ಯಕ್ಷರ ಕಾರ್ಯಾಲಯ, ‍‍ಪುಟಿನ್‌ ಸಹಿ ಮಾಡಿರುವ ಕಡತಗಳಿಗೆ ಬೆಲೆಯೇ ಇಲ್ಲ ಎಂದು ಹೇಳಿದೆ.

‘ದಕ್ಷಿಣ ಕೆರ್ನಾನ್‌ ಪ್ರದೇಶದಲ್ಲಿ ರಷ್ಯಾ ವಶಪಡಿಸಿಕೊಂಡಿದ್ದ ಏಳು ಗ್ರಾಮಗಳನ್ನು ನಾವು ಮರಳಿ ವಶಕ್ಕೆ ಪಡೆದಿದ್ದೇವೆ. ಅಲ್ಲಿ ಉಕ್ರೇನ್‌ನ ಧ್ವಜಗಳನ್ನು ಹಾರಿಸಲಾಗಿದೆ’ ಎಂದು ಕೀವ್‌ನ ಸೇನಾ ಪಡೆ ಬುಧವಾರ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು