ಗುರುವಾರ , ಅಕ್ಟೋಬರ್ 6, 2022
22 °C
ಬ್ರಿಟನ್‌ನ ನೂತನ ಪ್ರಧಾನಿಯಾಗಿ ರಾಣಿಯಿಂದ ನೇಮಕ

ಭರವಸೆಯ ರಾಷ್ಟ್ರವಾಗಿ ಬ್ರಿಟನ್‌: ಲಿಜ್‌ ಟ್ರಸ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಂಡನ್‌: ಬ್ರಿಟನ್‌ನ ನೂತನ ಪ್ರಧಾನಿ, ಕನ್ಸರ್ವೇಟಿವ್ ಪಕ್ಷದ ನಾಯಕಿ ಲಿಜ್‌ ಟ್ರಸ್‌ ಅವರು, ತೆರಿಗೆ ಕಡಿತ ಮತ್ತು ಸುಧಾರಣೆ ಕ್ರಮಗಳ ಮೂಲಕ ಆರ್ಥಿಕತೆಗೆ ಚೇತರಿಕೆ ನೀಡುವ ಭರವಸೆ ನೀಡಿದ್ದಾರೆ

ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಂಗಳವಾರ, ಪ್ರಧಾನಿ ಕಾರ್ಯಾಲಯ ‘10, ಡೌನಿಂಗ್‌ ಸ್ಟ್ರೀಟ್’ನ ಹೊರಗಡೆ ಮಾತನಾಡಿದ ಅವರು, ನಿರ್ಣಾಯಕ ಕಾಲಘಟ್ಟದಲ್ಲಿ ಗುರುತರ ಹೊಣೆಗಾರಿಕೆ ಹೊತ್ತಿರುವುದಕ್ಕೆ ಹೆಮ್ಮೆ ಆಗುತ್ತಿದೆ’ ಎಂದರು. 

ಇದಕ್ಕೂ ಮೊದಲು ಬ್ರಿಟನ್‌ನ ರಾಣಿ 2ನೇ ಎಲಿಜಬೆತ್‌ ಅವರು, 47  ವರ್ಷದ ಲಿಜ್‌ ಟ್ರಸ್ ಅವರನ್ನು ನೂತನ ಪ್ರಧಾನಿಯಾಗಿ ನೇಮಿಸಿದರು.

‘ನನ್ನ ನೇತೃತ್ವದ ಸರ್ಕಾರ ಬ್ರಿಟನ್‌ ಅನ್ನು ಒಂದು ಭರವಸೆಯ ರಾಷ್ಟ್ರವಾಗಿ ರೂಪಿಸಲು ಒತ್ತು ನೀಡಲಿದೆ. ಅತ್ಯಧಿಕ ವೇತನದ ನೌಕರಿ, ಸುರಕ್ಷಿತ ರಸ್ತೆ ನಮ್ಮ ಆಶಯ. ದೇಶದಲ್ಲಿ ಪ್ರತಿಯೊಬ್ಬರಿಗೂ ಅವರು ಅರ್ಹರಿರುವ ಅವಕಾಶಗಳು ದೊರೆಯಬೇಕು’ ಎಂದರು.

ಈ ಗುರಿಸಾಕಾರಗೊಳಿಸಲು ಈ ದಿನ ಹಾಗೂ ಪ್ರತಿ ದಿನ ಕಾರ್ಯನಿರ್ವಹಿಸುತ್ತೇವೆ ಎಂದು ಭರವಸೆ ನೀಡಿದರು. ದೇಶದ ಆರ್ಥಿಕತೆ ಉತ್ತಮಪಡಿಸಲು ದಿಟ್ಟ ಯೋಜನೆ ಹೊಂದಿದ್ದೇವೆ ಎಂದು ಹೇಳಿದರು.

ರಾಣಿಯಿಂದ ಆಹ್ವಾನ: ಸ್ಕಾಟ್ಲೆಂಡ್‌ನ ಅಬೆರ್ಡೀನ್‌ಶೈರ್‌ನಲ್ಲಿರುವ ರಾಣಿ ಅವರ ಬಲ್‌ಮೊರಲ್‌ ಕ್ಯಾಸಲ್‌ ನಿವಾಸಕ್ಕೆ ತೆರಳಿದ ಲಿಜ್‌ ಟ್ರಸ್‌ ಅವರಿಗೆ 96 ವರ್ಷದ ರಾಣಿ ಎಲಿಜಬೆತ್, ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲು ಆಹ್ವಾನಿಸಿದರು.

ಅದಕ್ಕೂ ಪೂರ್ವದಲ್ಲಿ ಹಾಲಿ ಪ್ರಧಾನಿ ಬೋರಿಸ್ ಜಾನ್ಸನ್‌ ಅವರು ರಾಣಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದರು. ಲಿಜ್‌ ಟ್ರಸ್‌ ಈಗ  ತಮ್ಮ ಸಂಪುಟದ ಸದಸ್ಯರನ್ನು ಆಯ್ಕೆಯ ಸಿದ್ಧತೆಯಲ್ಲಿ ಇದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು