ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟನ್ ಪ್ರಧಾನಿ ಗಾದಿಯತ್ತ ರಿಷಿ ಸುನಕ್ ದಾಪುಗಾಲು: ಐವರ ನಡುವೆ ಪೈಪೋಟಿ

Last Updated 15 ಜುಲೈ 2022, 11:12 IST
ಅಕ್ಷರ ಗಾತ್ರ

ಲಂಡನ್: ಬೋರಿಸ್ ಜಾನ್ಸನ್ ಅವರಿಂದ ತೆರವಾದ ಕನ್ಸರ್ವೆಟಿವ್ ಪಕ್ಷದ ನಾಯಕನ ಸ್ಥಾನ ಮತ್ತು ಬ್ರಿಟನ್ ಪ್ರಧಾನಿ ಹುದ್ದೆಯ ರೇಸ್‌ನಲ್ಲಿ ಭಾರತ ಮೂಲದ ಬ್ರಿಟನ್‌ನ ಮಾಜಿ ಹಣಕಾಸು ಸಚಿವ ರಿಷಿ ಸುನಕ್ ತಮ್ಮ ಬಿಗಿಹಿಡಿತವನ್ನು ಮುಂದುವರಿಸಿದ್ದಾರೆ.

ಗುರುವಾರ ನಡೆದ ಮತ್ತೊಂದು ಸುತ್ತಿನ ಮತದಾನದಲ್ಲಿ 101 ಮತಗಳನ್ನು ಪಡೆದು ಅಗ್ರ ಸ್ಥಾನ ಕಾಯ್ದುಕೊಂಡಿದ್ದಾರೆ.

ಕೇವಲ 27 ಮತಗಳನ್ನು ಪಡೆದು ಹೊರಬಿದ್ದ ಭಾರತ ಮೂಲದ ಅಟಾರ್ನಿ ಜನರಲ್ ಸುಯೆಲ್ಲಾ ಬ್ರೇವರ್‌ಮನ್ ಬಳಿಕ ಕನ್ಸರ್ವೆಟಿವ್ ಪಕ್ಷದ ನಾಯಕನ ಸ್ಥಾನದ ರೇಸ್‌ನಲ್ಲಿ ಐದು ಮಂದಿ ಉಳಿದಿದ್ದಾರೆ. ಅವರೆಲ್ಲರಲ್ಲೂ ರಿಷಿ ಸುನಕ್ ಮುಂಚೂಣಿಯಲ್ಲಿದ್ದಾರೆ.

ರಿಷಿ ಸುನಕ್ ಜೊತೆ ವಾಣಿಜ್ಯ ಸಚಿವೆಪೆನ್ನಿ ಮರಡೌಂಟ್(83 ಮತ), ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರೂಜ್(62 ಮತ), ಮಾಜಿ ಸಚಿವ ಕೆಮಿ ಬಡೆನೊಚ್(49 ಮತ) ಮತ್ತು ಟೋಮ್ ಟುಗೆಂದಾಟ್(32 ಮತ) ಮುಂದಿನ ಸುತ್ತಿಗೆ ಪ್ರವೇಶಿಸಿದಿದ್ದಾರೆ.

ಮುಂದಿನ ಕೆಲ ಸುತ್ತುಗಳ ಮತದಾನದಲ್ಲಿ ಕನ್ಸರ್ವೆಟಿವ್ ಪಕ್ಷದ ಸಂಸದರು ಈ ಐವರಲ್ಲಿ ಇಬ್ಬರನ್ನು ಅಂತಿಮ ಹಂತಕ್ಕೆ ಆಯ್ಕೆ ಮಾಡಲಿದ್ದಾರೆ.

‘ಕೇರ್ ಸ್ಟಾರ್ಮರ್(ಲೇಬರ್ ಪಕ್ಷದ ನಾಯಕ) ಅವರನ್ನು ಹಿಂದಿಕ್ಕಿ ಗೆಲುವು ಸಾಧಿಸುವುದಕ್ಕೆ ನಾನೇ ಸೂಕ್ತ ವ್ಯಕ್ತಿ ಎಂಬುದು ನನಗೆ ಅರಿವಾಗಿದೆ’ಎಂದು ರಿಷಿ ಸುನಕ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಎರಡನೇ ಸುತ್ತಿನ ಮತದಾನದಲ್ಲಿ ಹೊರಬಿದ್ದ ಬ್ರೇವರ್‌ಮನ್ ಅವರ ಪರ ಇದ್ದ 27 ಮತಗಳು ಮುಂದಿನ ಸುತ್ತುಗಳಲ್ಲಿ ಈ ಐವರ ಪೈಕಿ ಯಾರಿಗೆ ಬೀಳಲಿವೆ ಎಂಬುದೇ ಮುಂದಿನ ಕುತೂಹಲವಾಗಿದೆ.

ಎರಡನೇ ಸುತ್ತಿನಲ್ಲಿ 83 ಮತ ಪಡೆದಿರುವ ವಾಣಿಜ್ಯ ಸಚಿವ ಪೆನ್ನಿ ಮರಡೌಂಟ್, ರಿಷಿ ಸುನಕ್ ಅವರ ಅತ್ಯಂತ ಸಮೀಪದ ಪ್ರತಿಸ್ಪರ್ಧಿಯಾಗಿದ್ದಾರೆ. ಈ 27 ಮತಗಳು ಇಲ್ಲಿ ವ್ಯತ್ಯಾಸ ಮಾಡಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ಇವನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT