ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟನ್ ಪ್ರಧಾನಿಯಾಗ್ತಾರಾ ನಾರಾಯಣಮೂರ್ತಿ ಅಳಿಯ? ರಿಷಿ ಸುನಕ್ ಬಗ್ಗೆ ಕೆಲ ಮಾಹಿತಿ

ಅಕ್ಷರ ಗಾತ್ರ

ಲಂಡನ್: ಬ್ರಿಟನ್ ಹಣಕಾಸು ಸಚಿವರಾಗಿದ್ದ ರಿಷಿ ಸುನಕ್ ಸೇರಿದಂತೆ ಹಲವು ಸಚಿವರು ತಮ್ಮ ಸಂಪುಟಕ್ಕೆ ರಾಜೀನಾಮೆ ನೀಡಿದ ಬಳಿಕ ಒತ್ತಡಕ್ಕೆ ಮಣಿದಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಇದೀಗ, ಜಗತ್ತಿನ ಪ್ರಬಲ ದೇಶಗಳಲ್ಲಿ ಒಂದಾದ ಬ್ರಿಟನ್ನಿನಲ್ಲಿ ನೂತನ ಪ್ರಧಾನಿ ಆಯ್ಕೆಗೆ ಕಸರತ್ತು ಶುರುವಾಗಿದೆ. ಬೋರಿಸ್ ಜಾನ್ಸನ್ ಉತ್ತರಾಧಿಕಾರಿಯಾಗಿ ಒಂದಿಬ್ಬರ ಹೆಸರು ಕೇಳಿಬರುತ್ತಿವೆ. ಅದರಲ್ಲಿ ಪ್ರಮುಖವಾದದ್ದು, ಭಾರತೀಯ ಮೂಲದ, ಇನ್ಫೋಸಿಸ್ ನಾರಾಯಣಮೂರ್ತಿ ಅವರ ಅಳಿಯ ರಿಷಿ ಸುನಕ್ ಅವರ ಹೆಸರು.

ರಿಷಿ ಸುನಕ್ ಬಗ್ಗೆ ತಿಳಿದುಕೊಳ್ಳಬೇಕಾದ ಕೆಲ ಪ್ರಮುಖ ಮಾಹಿತಿ ಇಲ್ಲಿದೆ.

* ರಿಷಿ ಸುನಕ್ ಅವರು ಫೆಬ್ರುವರಿ 13, 2020ರಿಂದ ಬ್ರಿಟನ್ನಿನ ಹಣಕಾಸು ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇತ್ತೀಚೆಗೆ, ಬೋರಿಸ್ ಅವರ ಅದಕ್ಷತೆ ವಿರುದ್ಧ ಸಿಡಿದು ರಾಜೀನಾಮೆ ನೀಡಿದ್ದಾರೆ.

* ಭಾರತದ ಪಂಜಾಬ್ ಮೂಲದ ಯಶ್ವೀರ್ ಮತ್ತು ಉಷಾ ಸುನಕ್ ದಂಪತಿಯ ಮಗ ರಿಷಿ ಸುನಕ್. ಬ್ರಿಟನ್ನಿನ ಸೌತಾಂಪ್ಟನ್‌ನಲ್ಲಿ ಜನಿಸಿದರು.

* ಕೊರೊನಾ ಸಾಂಕ್ರಾಮಿಕದ ಸಂದರ್ಭ ಬ್ರಿಟನ್ನಿನ ಉದ್ಯಮಗಳ ರಕ್ಷಣೆಗೆ 410 ಬಿಲಿಯನ್ ಪೌಂಡ್ ರಕ್ಷಣಾ ಪ್ಯಾಕೇಜ್ ಘೋಷಿಸಿದ್ದಕ್ಕಾಗಿ ರಿಷಿ ಸುನಕ್ ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದರು.

* ಇತ್ತೀಚಿನವರೆಗೂ ತಮ್ಮ ನಾಯಕತ್ವದ ಗುಣಗಳಿಂದಾಗಿ ರಿಷಿ ಸುನಕ್ ಭಾರೀ ಹೆಸರುವಾಸಿಯಾಗಿದ್ದರು.

* ಕೊರೊನಾ ಸಂದರ್ಭ ನಿವಾಸಿಗಳ ಮನೆ ನಿರ್ವಹಣೆಗೆ ಸಾಕಷ್ಟು ಹಣ ನೀಡದಿದ್ದಕ್ಕೆ ರಿಷಿ ಟೀಕೆಗೆ ಗುರಿಯಾಗಿದ್ದರು, ಲಾಕ್‌ಡೌನ್ ನಿಯಮ ಮೀರಿ ಬೋರಿಸ್ ಜಾನ್ಸನ್ ಜೊತೆ ಪಾರ್ಟಿ ಮಾಡಿದ್ದಕ್ಕಾಗಿ ದಂಡ ತೆರಬೇಕಾಯ್ತು.

* ತಮ್ಮ ಪತ್ನಿ ಅಕ್ಷತಾ ಮೂರ್ತಿ ವಿದೇಶಿ ವ್ಯವಹಾರದಲ್ಲಿ ಗಳಿಸಿದ ಲಾಭಕ್ಕೆ ಸಂಬಂಧಿಸಿದಂತೆ ಬ್ರಿಟನ್ನಿಗೆ ತೆರಿಗೆ ಕಟ್ಟಿಲ್ಲವೆಂಬ ಆರೋಪಕ್ಕೆ ಸಂಬಂಧಿಸಿದಂತೆ ರಿಷಿ ತೀವ್ರ ಒತ್ತಡಕ್ಕೆ ಸಿಲುಕಿದ್ದರು.

* ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿಯವರ ಅಳಿಯ ರಿಷಿ ಸುನಕ್, ಮೇ 2015ರಂದು ರಿಚ್‌ಮಂಡ್ ಕ್ಷೇತ್ರದಿಂದ ಕನ್ಸರ್ವೆಟಿವ್ ಪಕ್ಷದಿಂದ ಸಂಸದರಾಗಿ ಆಯ್ಕೆಯಾಗಿದ್ದರು.

* ತೆರೆಸಾ ಮೆ ಅವರ ಬ್ರೆಕ್ಸಿಟ್ ಒಪ್ಪಂದ ಹಿಂಪಡೆಯುವುದರ ಪರವಾಗಿ ಮೂರು ಭಾರಿ ಮತ ಹಾಕಿದ್ದರು. ತೆರೆಸಾ ರಾಜೀನಾಮೆ ಬಳಿಕ ಬೋರಿಸ್ ಅವರಿಗೆ ಬೆಂಬಲ ನೀಡಿದರು.

* ರಾಜಕೀಯ ಪ್ರವೇಶಕ್ಕೂ ಮುನ್ನ ಪ್ರಮುಖ ಬ್ಯಾಂಕ್‌ವೊಂದರಲ್ಲಿ ವಿಶ್ಲೇಷಕರಾಗಿ ಸುನಕ್ ಕೆಲಸ ಮಾಡಿದ್ದರು.

* ಕ್ಯಾಲಿಫೋರ್ನಿಯಾದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಅಕ್ಷತಾ ಮೂರ್ತಿಯವರನ್ನು ಭೇಟಿಯಾಗಿದ್ದ ರಿಷಿ ಸುನಕ್, ಆಗಸ್ಟ್, 2009ರಲ್ಲಿ ವಿವಾಹವಾಗಿದ್ದರು.

ಇವನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT