ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್ ಸಂಘರ್ಷ ನ್ಯಾಟೊ ಜತೆಗಿನ ಯುದ್ಧವಲ್ಲ ಎಂದ ರಷ್ಯಾ: ಕಾರಣವೇನು?

Last Updated 30 ಏಪ್ರಿಲ್ 2022, 5:10 IST
ಅಕ್ಷರ ಗಾತ್ರ

ಮಾಸ್ಕೊ: ಉಕ್ರೇನ್ ಜತೆಗಿನ ಸಂಘರ್ಷವನ್ನು ನ್ಯಾಟೊ ಜತೆಗಿನ ಯುದ್ಧ ಎಂಬುದಾಗಿ ಪರಿಗಣಿಸಿಲ್ಲ ಎಂದು ರಷ್ಯಾ ಹೇಳಿದೆ.

ಉಕ್ರೇನ್ ಸಂಘರ್ಷವನ್ನು ನ್ಯಾಟೊ ಜತೆಗಿನ ಯುದ್ಧ ಎಂದು ಪರಿಗಣಿಸಿದರೆ ಅಣ್ವಸ್ತ್ರ ಸಮರದ ಭೀತಿ ಹೆಚ್ಚಾಗಲಿದೆ ಎಂದು ರಷ್ಯಾದ ವಿದೇಶಾಂಗ ಸಚಿವ ಸರ್ಗೈ ಲಾವ್ರೊವ್ ಹೇಳಿರುವುದಾಗಿ ‘ಆರ್‌ಐಎ’ ಸುದ್ದಿಸಂಸ್ಥೆ ವರದಿ ಮಾಡಿದೆ.

ರಷ್ಯಾ ಜತೆಗಿನ ಶಾಂತಿ ಮಾತುಕತೆ ಸ್ಥಗಿತಗೊಳ್ಳಲು ಉಕ್ರೇನ್‌ ಕಾರಣ. ಆದೇಶವು ಮಾತುಕತೆ ವಿಚಾರದಲ್ಲಿ ಪದೇಪದೆ ನಿಲುವು ಬದಲಿಸುತ್ತಿದೆ ಎಂದು ದುಬೈ ಮೂಲದ ‘ಅಲ್ ಅರೇಬಿಯಾ’ ಸುದ್ದಿವಾಹಿನಿಗೆ ಲಾವ್ರೊವ್ ಹೇಳಿರುವುದಾಗಿಯೂ ವರದಿ ಉಲ್ಲೇಖಿಸಿದೆ.

ಉಕ್ರೇನ್‌ಗೆ ಪಾಶ್ಚಾತ್ಯ ರಾಷ್ಟ್ರಗಳು ಶಸ್ತ್ರಾಸ್ತ್ರ ಪೂರೈಸುತ್ತಿರುವುದರಿಂದ ನಿಜವಾಗಿಯೂ ಮೂರನೇ ವಿಶ್ವಸಮರ ನಡೆಯುವ ಅಪಾಯವಿದೆ ಎಂದು ರಷ್ಯಾ ಇತ್ತೀಚೆಗೆ ಎಚ್ಚರಿಕೆ ನೀಡಿತ್ತು. ಈ ಎಲ್ಲ ಬೆಳವಣಿಗೆಗಳ ಮಧ್ಯೆಯೇ, ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರೆಸ್‌ ಅವರು ಉಕ್ರೇನ್ ರಾಜಧಾನಿ ಕೀವ್‌ಗೆ ಭೇಟಿ ನೀಡಿದ ಸಂದರ್ಭದಲ್ಲೇ ಶುಕ್ರವಾರ ಆ ನಗರದ ಮೇಲೆ ರಷ್ಯಾ ದಾಳಿ ನಡೆಸಿತ್ತು. ಇದನ್ನು ವಿಶ್ವದ ಹಲವು ರಾಷ್ಟ್ರಗಳು ಖಂಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT