ಮಾಸ್ಕೊ: ರಷ್ಯಾವು‘ಸ್ಪುಟ್ನಿಕ್–V’ ಹೆಸರಿನ ಕೋವಿಡ್–19 ಲಸಿಕೆಯ ಉತ್ಪಾದನೆಯನ್ನು ಶನಿವಾರ ಆರಂಭಿಸಿದ್ದು, ಲಸಿಕೆಯ ಮೊದಲ ಬ್ಯಾಚ್ ಉತ್ಪಾದನೆಯಾಗಿದೆ ಎಂದು ಇಂಟರ್‌ಫ್ಯಾಕ್ಸ್ ಸುದ್ದಿ ಸಂಸ್ಥೆ ಅಲ್ಲಿನ ಆರೋಗ್ಯ ಸಚಿವಾಲಯವನ್ನು ಉಲ್ಲೇಖಿಸಿ ವರದಿ ಮಾಡಿದೆ.

ಪಿಡುಗಿಗೆ ಲಸಿಕೆ ಸಿದ್ಧಪಡಿಸಲು ವಿಶ್ವದಲ್ಲಿ ಹಲವು ಕಂಪನಿಗಳು ಸ್ಪರ್ಧೆಗಿಳಿದಿವೆ. ಇದರ ನಡುವೆ ಪ್ರಸಿದ್ಧಿ, ಘನತೆಗಾಗಿ ರಷ್ಯಾ ಲಸಿಕೆಗೆ ತ್ವರಿತವಾಗಿ ಒಪ್ಪಿಗೆ ನೀಡಿದೆ. ಇದರಿಂದ ಸುರಕ್ಷತೆ ಪ್ರಶ್ನೆ ಎದ್ದಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.ಇದನ್ನು ಜಗತ್ತಿನ ಮೊದಲ ಕೋವಿಡ್–19 ಲಸಿಕೆ ಎನ್ನುತ್ತಿರುವ ರಷ್ಯಾ, ಮಾಸಾಂತ್ಯದಲ್ಲಿ ಇದನ್ನು ಬಳಕೆಗೆ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದೆ.

ರಷ್ಯಾದ ಗೇಮಲಿಯ ರಿಸರ್ಚ್ ಇನ್‌ಸ್ಟಿಟ್ಯೂಟ್ ಈ ಲಸಿಕೆ ಅಭಿವೃದ್ಧಿಪಡಿಸಿದ್ದು, ಪ್ರತಿ ತಿಂಗಳು 50 ಲಕ್ಷ ಲಸಿಕೆಗಳನ್ನು ಉತ್ಪಾದಿಸುವ ಗುರಿ ಹೊಂದಿದೆ ಎಂದು ಇಂಟರ್‌ಫ್ಯಾಕ್ಸ್ ವರದಿ ಮಾಡಿದೆ.

ಮೂರನೇ ಹಂತದ ಪರೀಕ್ಷೆ ಇಲ್ಲ:ಮೂರು ಹಂತದ ಕ್ಲಿನಿಕಲ್ ಟ್ರಯಲ್‌ನ ಫಲಿತಾಂಶಗಳು ಬಂದ ನಂತರವಷ್ಟೇ ಲಸಿಕೆಯನ್ನು ಬಿಡುಗಡೆ ಮಾಡಬೇಕು. ಈ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಸಹ ರಷ್ಯಾಗೆ ಹೇಳಿತ್ತು. ಆದರೆ ಎರಡೇ ಹಂತ ಪೂರ್ಣಗೊಳಿಸಿ ರಷ್ಯಾವು ಲಸಿಕೆಗೆ ಒಪ್ಪಿಗೆ ನೀಡಿದೆ.

‘ನನ್ನ ಮಗಳೇ ಈ ಲಸಿಕೆಯನ್ನು ತೆಗೆದುಕೊಂಡಿದ್ದಾಳೆ.ಈ ಲಸಿಕೆ ಸುರಕ್ಷಿತವಾಗಿದೆ’ ಎನ್ನುವ ಭರವಸೆಯನ್ನೂ ಕಳೆದ ಮಂಗಳವಾರ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜನರಿಗೆ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.