ಸೋಮವಾರ, ಆಗಸ್ಟ್ 15, 2022
27 °C

ಉಕ್ರೇನ್‌ನ ಲೈಸಿಚಾನ್‌ಸ್ಕ್‌ ನಗರ ವಶಕ್ಕೆ ರಷ್ಯಾ ಯತ್ನ

ಎಪಿ Updated:

ಅಕ್ಷರ ಗಾತ್ರ : | |

Prajavani

ಕೀವ್‌: ಪೂರ್ವ ಉಕ್ರೇನ್‌ನ ಎರಡನೇ ನಗರ ಲೈಸಿಚಾನ್‌ಸ್ಕ್‌ ವಶಪಡಿಸಿಕೊಳ್ಳಲು ರಷ್ಯಾ ಪಡೆಗಳು ಪ್ರಯತ್ನಿಸುತ್ತಿದ್ದು, ವಾರಗಳ ಹೋರಾಟದ ನಂತರ ಉಕ್ರೇನ್ ಪಡೆಗಳು ಈ ನಗರದಿಂದ ವಾಪಸಾಗಲು ಪ್ರಾರಂಭಿಸಿವೆ ಎಂದು ಉಕ್ರೇನ್‌ನ ಪ್ರಾದೇಶಿಕ ಸೇನಾ ಗವರ್ನರ್ ಸೆರ್‌ಹಿಯ್‌ ಹೈಡೇ ತಿಳಿಸಿದ್ದಾರೆ.

ನಗರದ ಹೃದಯಭಾಗದಿಂದ ದೂರವಿರುವ ಪ್ರದೇಶಗಳ ಮೇಲೆ ರಷ್ಯಾ ಕ್ಷಿಪಣಿ ದಾಳಿ ಆರಂಭಿಸಿದೆ. ದಕ್ಷಿಣದಿಂದ ಲೈಸಿಚಾನ್‌ಸ್ಕ್‌ ನಗರ ನಿರ್ಬಂಧಿಸಲು ಪ್ರಯತ್ನಿಸುತ್ತಿವೆ.

ರಷ್ಯಾದ ಬಾಂಬ್ ದಾಳಿಯಿಂದ ಸೆವೆಯೆರೊಡೊನೆಟ್‌ಸ್ಕ್ ನ ಹೆಚ್ಚಿನ ಭಾಗ ಹಾನಿಗೊಂಡಿದೆ. ಉಕ್ರೇನ್ ಪಡೆಗಳ ನೂರಾರು ಸೈನಿಕರು ನಗರದ ಅಂಚಿನಲ್ಲಿರುವ ರಾಸಾಯನಿಕ ಕಾರ್ಖಾನೆಯಲ್ಲಿ ಸುಮಾರು 500 ನಾಗರಿಕರೊಂದಿಗೆ ಆಶ್ರಯ ಪಡೆದಿದ್ದಾರೆ.

ಶನಿವಾರ ಬೆಳಗ್ಗೆ ಮಧ್ಯ ಉಕ್ರೇನ್‌ನ ಝೈಟೊಮಿರ್ ಪ್ರದೇಶದ ಮೇಲೆ ಸುಮಾರು ರಷ್ಯಾದ ಸುಮಾರು 30 ರಾಕೆಟ್‌ಗಳನ್ನು ಹಾರಿಸಿದ್ದು, ಒಬ್ಬ ಉಕ್ರೇನ್‌ ಸೈನಿಕನ ಹತ್ಯೆಯಾಗಿದೆ ಎಂದು ಪ್ರಾದೇಶಿಕ ಗವರ್ನರ್ ವಿಟಾಲಿ ಬುಚೆಂಕೊ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು