ಮೊದಲ ಹಂತದ ಕೋವಿಡ್–19 ಲಸಿಕೆ ಬಿಡುಗಡೆ ಮಾಡಿದ ರಷ್ಯಾ

ಮಾಸ್ಕೊ: ಕೋವಿಡ್ ವಿರುದ್ಧ ಅಭಿವೃದ್ಧಿಪಡಿಸಲಾಗಿರುವ ಸ್ಪುಟ್ನಿಕ್–ವಿ ಲಸಿಕೆಯನ್ನು ರಷ್ಯಾ ಸರ್ಕಾರವು ಮಂಗಳವಾರ ನಾಗರಿಕರಿಗಾಗಿ ಬಿಡುಗಡೆ ಮಾಡಿದೆ. ಈ ಕುರಿತು ಅಲ್ಲಿನ ಆರೋಗ್ಯ ಸಚಿವಾಲಯದ ಹೇಳಿಕೆ ಉಲ್ಲೇಖಿಸಿ ರಷ್ಯಾದ ಸುದ್ದಿಸಂಸ್ಥೆ ಟಿಎಸ್‌ಎಸ್ ವರದಿ ಮಾಡಿದೆ.
‘ಮಾಸ್ಕೊದ ಗಮೆಲಿಯಾ ಇನ್‌ಸ್ಟಿಟ್ಯೂಟ್ ಮತ್ತು ರಷ್ಯಾ ರಕ್ಷಣಾ ಸಚಿವಾಲಯದ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಸ್ಪುಟ್ನಿಕ್–ವಿ ಲಸಿಕೆಯ ಅಗತ್ಯ ಪರೀಕ್ಷೆಗಳನ್ನು ನಡೆಸಲಾಗಿದೆ. ಮೊದಲ ಹಂತದ ಲಸಿಕೆಗಳನ್ನು ನಾಗರಿಕರಿಗಾಗಿ ಬಿಡುಗಡೆ ಮಾಡಲಾಗಿದೆ’ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಶೀಘ್ರದಲ್ಲೇ ಪ್ರಾದೇಶಿಕ ಮಟ್ಟದ ವಿತರಣೆಯನ್ನೂ ಮಾಡಲಾಗುವುದು ಎಂದು ಸಚಿವಾಲಯ ಹೇಳಿದೆ.
ಕೆಲವೇ ತಿಂಗಳುಗಳಲ್ಲಿ ನಗರದಲ್ಲಿರುವ ಹೆಚ್ಚಿನ ನಾಗರಿಕರಿಗೆ ಲಸಿಕೆ ಹಾಕಿಸುವ ಭರವಸೆಯಿದೆ ಎಂದು ಭಾನುವಾರವಷ್ಟೇ ಮಾಸ್ಕೊ ಮೇಯರ್ ಸೆರ್ಗೆ ಸೊಬಯಾನಿನ್ ಹೇಳಿದ್ದರು.
ಇನ್ನಷ್ಟು...
Explainer | ರಷ್ಯಾದ ಕೋವಿಡ್ ಲಸಿಕೆ 'ಸ್ಪುಟ್ನಿಕ್': ತಜ್ಞರಲ್ಲಿ ಆತಂಕ ಏಕೆ?
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.